ಕುಂದಾಪುರ ಮಿರರ್ ಸುದ್ದಿ…
ಕೋಟ: ನಾಗರ ಪಂಚಮಿಯ ಅಂಗವಾಗಿ ಕೋಟ ಸೇರಿದಂತೆ ವಿವಿಧ ಭಾಗಗಳ ದೇವಳ ಹಾಗೂ ನಾಗಬನದಲ್ಲಿ ಭಕ್ತರು ತನು ನೀಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಪುರಾಣ ಪ್ರಸಿದ್ಧ ಕ್ಷೇತ್ರಗಳಾದ ಕೋಟ ಅಮೃತೇಶ್ವರಿ ದೇವಳದಲ್ಲಿ ಅರ್ಚಕ ಅನಂತೇಶ್ ಐತಾಳ್ ಧಾರ್ಮಿಕ ವಿಧಿವಿಧಾನ ನೆರವೆರಿಸಿದರು. ಶ್ರೀ ದೇವಳದ ನಾಗಬನ ಆರಾಧಕರು ದೂರದೂರಿನಿಂದ ತನು ಸೇವೆಯನ್ನು ಶ್ರೀ ದೇವರಿಗೆ ಅರ್ಪಿಸಿದರು. ಶ್ರೀದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್, ಟ್ರಸ್ಟಿಗಳಾದ ಸತೀಶ್ ಜಿ ಹೆಗ್ಡೆ, ಚಂದ್ರ ಪೂಜಾರಿ, ಜೋಗಿ ಅರ್ಚಕರಾದ ಸುಬ್ರಾಯ ಜೋಗಿ, ರಾಘವೇಂದ್ರ ಜೋಗಿ, ಸಂತೋಷ್ ಜೋಗಿ, ಅಮೃತ್ ಜೋಗಿ, ಪ್ರಕಾಶ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಗುರುನರಸಿಂಹ ದೇವಳದ ಬನದಲ್ಲಿ ಪೂಜೆ
ಸಾಲಿಗ್ರಾಮದ ಶ್ರೀಗುರನರಸಿಂಹ ದೇವಳದಲ್ಲಿ ಅಲ್ಲಿನ ನಾಗಬನದಲ್ಲಿ ದೇವಳದ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ಜರಗಿತು. ದೇವಳದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಅರ್ಚಕರು ಉಪಸ್ಥಿತರಿದ್ದರು.