ಹಿರಿಯ ಯಕ್ಷಗಾನ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಅವರಿಗೆ ಮಯ್ಯ ಯಕ್ಷಶ್ರೀ ಪ್ರಶಸ್ತಿ ಗೌರವ

0
435

ಕುಂದಾಪುರ ಮಿರರ್ ಸುದ್ದಿ…

ಕೋಟ: ಸಾಸ್ತಾನ ಐರೋಡಿಯ ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವ ಯಕ್ಷೋತ್ಕರ್ಷ 2022 ಕಾರ್ಯಕ್ರಮದಲ್ಲಿ ಮಯ್ಯ ಯಕ್ಷಶ್ರೀ ಪ್ರಶಸ್ತಿ ಪ್ರದಾನ ಮತ್ತು ಮಣೂರು ವಾಸುದೇವ ಮಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ಸಾಸ್ತಾನ ಅಣಲಾಡಿ ಮಠದ ಲಕ್ಷ್ಮೀನರಸಿಂಹ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಮಯ್ಯ ಯಕ್ಷಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಕಳೆದ 30ವರ್ಷದಲ್ಲಿ ಯಕ್ಷಗಾನಕ್ಕೆ ನೀಡಿದ ಕೊಡುಗೆ ಕಡಿಮೆ. ಕೊಡಬೇಕಾದ್ದು ತುಂಬಾ ಇದೆ ಎಂದ ಅವರು ಯಕ್ಷಗಾನದಲ್ಲಿ ಹೊಣೆಗಾರಿಕೆ ಅಗತ್ಯ. ಯಕ್ಷ ತಿರುಗಾಟ ಎಲ್ಲವನ್ನೂ ಕಲಿಸಿದೆ, ಸಿಹಿಕಹಿ, ಸುಖ ದುಖ, ಗೌರವ, ಅವಮಾನ ಎಲ್ಲವನ್ನು ಅನುಭವಿಸಿದ್ದೇನೆ. ಆದರೂ ಇದರಲ್ಲಿ ಸಂತೋಷ ಕಂಡಿದ್ದೇನೆ ಎಂದು ತನ್ನ ಯಕ್ಷ ಸೇವೆಯ ಅನುಭವದ ಮಾತನ್ನು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್‍ನ ಪ್ರವರ್ತಕ ವಸಂತ ಗಿಳಿಯಾರು ಉದ್ಘಾಟಿಸಿದರು.

ಅಣಲಾಡಿ ಮಠ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕಾರಂತ ಅಧ್ಯಕ್ಷತೆ ವಹಿಸಿದ್ದರು.

Click Here

ಪೆರ್ಡೂರು ಮೇಳದ ಯಜಮಾನ ವೈ.ಕರುಣಾಕರ ಶೆಟ್ಟಿ, ಹಿರಿಯ ಯಕ್ಷ ರಂಗಭೂಮಿ ಕಲಾವಿದ ಹಾಗೂ ಕಿರುತೆರೆ ನಿರ್ದೇಶಕ ರಮೇಶ್ ಬೇಗಾರ್, ಬೆಂಗಳೂರಿನ ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಹರ್ಷ ಆರ್ ಹೇರ್ಳೆ, ರಶ್ಮಿ ಹೇರ್ಳೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, ಪ್ರಸಂಗಕರ್ತ ಪವನ್ ಕಿರಣಕೆರೆ, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ವಾಸ್ತು ತಜ್ಞ ಹಾಗೂ ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಕೋಟೇಶ್ವರ, ಕುಂದಾಪ್ರ ಕನ್ನಡದ ರಾಯಭಾರಿ ಮನು ಹಂದಾಡಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಮಯ್ಯ ಯಕ್ಷಶ್ರೀ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ವಿದ್ಯಾಧರ ರಾವ್ ಜಲವಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು. ಮಣೂರು ವಾಸುದೇವ ಮಯ್ಯ ಸ್ಮಾರಕ ಪ್ರಶಸ್ತಿಯನ್ನು ಪ್ರಸಿದ್ಧ ಪ್ರಸಂಗಕರ್ತ ಹಾಗೂ ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ನೀಡಲಾಯಿತು.

ಮಯ್ಯ ಯಕ್ಷಶ್ರೀ ಪ್ರತಿಷ್ಠಾನದ ಸಂಸ್ಥಾಪಕ ಋಷಿಕುಮಾರ್ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕರ್ಕೆರಾ ಸ್ವಾಗತಿಸಿದರು. ರಾಜೇಶ್ ಕರ್ಕೆರಾ ಕೋಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗದಾಯುದ್ಧ ಯಕ್ಷಗಾನ, ಹಿರಿಯ ಯಕ್ಷಕವಿ ಕಂದಾವರ ರಘುರಾಮ ಶೆಟ್ಟಿ ಅವರ ಪಾತ್ರ ನಿರ್ವಹಣೆಯಲ್ಲಿ ಪ್ರಮದಾ ಪ್ರಸಂಗ ತಾಳಮದ್ದಳೆ ನಡೆಯಿತು.

ಯಕ್ಷಗಾನದಲ್ಲಿ ಮೊತ್ತಮೊದಲ ಪ್ರಯೋಗವೆನಿಸಿದ ಪ್ರಸಂಗಕರ್ತರ ತಾಳಮದ್ದಳೆ – ಪ್ರಮದಾ ಪ್ರಸಂಗ ಸಭಾ ಕಾರ್ಯಕ್ರಮದ ಮೊದಲು ನಡೆಯಿತು.

Click Here

LEAVE A REPLY

Please enter your comment!
Please enter your name here