ಬಾಂಧವ್ಯ ಬ್ಲಡ್ ಕರ್ನಾಟಕ ತುರ್ತು ಸಹಾಯ ಯೋಜನೆ – ರೂ. 2.25ಲಕ್ಷ ಚೆಕ್ ಹಸ್ತಾಂತರ

0
226

ಕುಂದಾಪುರ ಮಿರರ್ ಸುದ್ದಿ…

ಕೋಟ: ಬಾಂಧವ್ಯ ಬ್ಲಡ್ ಕರ್ನಾಟಕ ತುರ್ತು ಸಹಾಯ ಯೋಜನೆಯ ಉಸಿರು ಯೋಜನೆಯಿಂದ ಸುಮನಾ ಕಾಮತ್ ಎನ್ನುವವರ ಒಂದುವರೆ ವರ್ಷದ ಹೆಣ್ಣು ಮಗುವಿಗೆ ಉಸಿರಾಟದ ತೊಂದರೆ ಇದ್ದು ತೀರಾ ಸಂಕಷ್ಟದಲ್ಲಿದ್ದವರಿಗೆ ವೃಕ್ಷಮಾತೆ ಪದ್ಮಶ್ರೀ ನಾಡೋಜ ಡಾ, ಸಾಲುಮರದ ತಿಮ್ಮಕ್ಕನವರ ಬೆಂಗಳೂರಿನ ಮಂಜುನಾಥ್ ನಗರದ ಅವರ ಮನೆಯಲ್ಲಿ ರೂ 2.25ಲಕ್ಷ ಚೆಕ್ ನ್ನು ತಿಮ್ಮಕ್ಕನವರ ಮೂಲಕ ಸುಮನಾ ಕಾಮತ್‍ರಿಗೆ ಮಂಗಳವಾರ ನೀಡಲಾಯಿತು.

Click Here

ಇದೇ ಸಂದರ್ಬದಲ್ಲಿ ಬಾಂಧವ್ಯ ಬ್ಲಡ್‍ನ ಸ್ಥಾಪಕ ಅಧ್ಯಕ್ಷ ದಿನೇಶ್ ಬಾಂಧವ್ಯ ಸಾಸ್ತಾನ ಇವರನ್ನು ಸಾಲುಮರದ ತಿಮ್ಮಕ್ಕ ವಿಶೇಷವಾಗಿ ಸನ್ಮಾನಿಸಿದರು.

ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೇಹಳ್ಳಿ, ಸಮಾಜ ಸೇವಕ ಸುಗುಟೂರು ಮಂಜುನಾಥ್, ಕಿರುತೆರೆ ನಿರ್ದೇಶಕ ವಿಜಯ್’ಕೃಷ್ಣ ಉಡುಪಿ, ಸಮಾಜ ಸೇವಕ ಆನಂದ್ ಯಾದವ್, ಪರಿಸರ ಪ್ರೇಮಿ ಉಮೇಶ್ ವನಸಿರಿ, ಅಂಬಿಕಾ ವಕ್ವಾಡಿ, ಅಶ್ವಿನಿ ವಿಜಯ್,ಶಿವು ಕುಂದಾಪುರ, ನಿತೀಶ್ ಬಾರಾಧ್ವಾಜ್, ಮನೀಶ್ ಮೊಯ್ಲಿ ಶ್ರೀನಿಧಿ ನಾಯಕ್, ಅನಂತ್ ಕೃಷ್ಣ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

15 ವರ್ಷದಿಂದ ನಾಡಿನಾದ್ಯಂತ ರಕ್ತದಾನ, ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್,ಬಡವರಿಗೆ ಮನೆ ನಿರ್ಮಾಣ, ಆರೋಗ್ಯ ಪೀಡಿತರಿಗೆ ಸಹಾಯ ಧನ, ಪರಿಸರ ಕಾಳಜಿ, ಸ್ವಚ್ಛತೆ ಸೇರಿದಂತೆ ಅನೇಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ಬಾಂಧವ್ಯ ಬ್ಲಡ್ ಕರ್ನಾಟಕ ಮಾದರಿಯಾಗಿದೆ .

Click Here

LEAVE A REPLY

Please enter your comment!
Please enter your name here