ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಿ ಗ್ರೋ ವಾಣಿಜ್ಯ ಮೇಳ ಉದ್ಘಾಟಿಸಿದ ಕಾಲೇಜಿನ ಸ್ಥಾಪಕ ಪ್ರಾಚಾರ್ಯೆ ಸೀಮಾ ಪಿ. ಶೆಟ್ಟಿ, ಹಣಕಾಸಿಗೆ ಸಂಬಂಧಿಸಿದ ವೃತ್ತಿ ಬದುಕಿನಲ್ಲಿ ಬರುವ ಬೇರೆ ಬೇರೆ ರೀತಿಯ ಸವಾಲುಗಳನ್ನು ಎದುರಿಸಲು, ವಾಣಿಜ್ಯ ಕಲಿಕೆಯನ್ನು ನಿತ್ಯ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎನ್ನುವುದನ್ನು ಈ ವಾಣಿಜ್ಯ ದಿನದ ಮೇಳ ಕಲಿಸಿಕೊಡಲಿದೆ. ಆತ್ಮನಿರ್ಭರ, ಮೇಕ್ ಇನ್ ಇಂಡಿಯಾದಂತಹ ಸರಕಾರಿ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಹಕಾರಕ್ಕೆ ಬರಲಿವೆ ಎಂದರು.
Video:
ಮುಖ್ಯ ಅತಿಥಿ ಮೂಡ್ಲಕಟ್ಟೆ ಎಂಐಟಿ ಕಾಲೇಜಿನ ತರಬೇತಿ, ಕೈಗಾರಿಕೆ ಸಂಬಂಧ, ಉದ್ಯೋಗ ನೇಮಕಾತಿ ವಿಭಾಗದ ಡೀನ್ ಅಮೃತಮಾಲಾ, ಪ್ರತಿ ಸೋಲನ್ನೂ ಸವಾಲಾಗಿ ಸ್ವೀಕರಿಸಿದವರಿಂದ ಕಲಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೋ.| ಉಮೇಶ್ ಶೆಟ್ಟಿ ಕೊತ್ತಾಡಿ, ಕಾಲೇಜಿನಲ್ಲಿ ಕಾಮರ್ಸ್ ಲ್ಯಾಬ್ ಮೂಲಕ ಪಠ್ಯಪೂರಕ ಪ್ರಾಯೋಗಿಕ ತರಬೇತಿ ದೊರೆಯುತ್ತದೆ. 18 ಜಿಲ್ಲೆಗಳ 1,400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಉಪಸ್ಥಿತರಿದ್ದರು.
ಕಾಲೇಜಿನ ಪೂರ್ವ ವಿದ್ಯಾರ್ಥಿನಿ, ಸಿಎ ತೇರ್ಗಡೆಯಾದ ಕಾಲೇಜಿನ ಮೊದಲ ವಿದ್ಯಾರ್ಥಿನಿ ತನುಷ್ ಡಿ.ರಾವ್ ಕೋಟೇಶ್ವರ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನಿತರ ಪರಿಚಯವನ್ನು ಉಪನ್ಯಾಸಕಿ ದೀಪಾ ಮಾಡಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ವೀಣಾ ಭಟ್ ಸ್ವಾಗತಿಸಿ, ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿ, ವಾಣಿಜ್ಯ ಮೇಳ ಸಂಯೋಜಕ ರಾಜೇಶ್ ಶೆಟ್ಟಿ ವಂದಿಸಿದರು.
ತರಗತಿಯ ಹೊರತಾಗಿ ಕಲಿಯಲು ವಾಣಿಜ್ಯ ವಿಭಾಗ ಅವಕಾಶ ಮಾಡಿಕೊಟ್ಟಿತ್ತು. ವಿದ್ಯಾರ್ಥಿಗಳು 7 ತಂಡಗಳನ್ನಾಗಿ ಮಾಡಿಕೊಂಡರು.
ಒಂದೊಂದು ಕೊಠಡಿಯಲ್ಲಿ ಒಂದೊಂದು ಮಾದರಿಯಲ್ಲಿ ವ್ಯವಹಾರಕ್ಕೆ ಮುಂದಾದರು. ಚಾಟ್, ತಿಂಡಿ ಮೊದಲಾದ ಆಹಾರ ಪದಾರ್ಥಗಳು, ತಾವೇ ಕಂಡುಹಿಡಿದ ಸಸ್ಯಮೂಲ ಔಷಧ, ಸ್ವತಃ ತಯಾರಿಸಿದ ಖಾದ್ಯಗಳು, ಸಣ್ಣಪುಟ್ಟ ಆಟಗಳ ಮೂಲಕ ಸಂಪಾದನೆ ಹೀಗೆ ಬೇರೆ ಬೇರೆ ವ್ಯಾಪಾರದ ದಾರಿ ಮೂಲಕ ಬದುಕಿನ ದಾರಿ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಾಧ್ಯತೆಗಳನ್ನು ಕಂಡುಕೊಂಡರು. ಇದಕ್ಕಾಗಿ ಕಾಲೇಜಿನಿಂದ ಅವರಿಗೆ ಬಹುಮಾನ ರೂಪದ ಪ್ರೋತ್ಸಾಹವೂ ಇತ್ತು.