ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನಲ್ಲಿ ಆ.15 ರಂದು ಪೂರ್ಣ ದಿನ ನಡೆಯುವ ಯಕ್ಷಗಾನ ಅಮೃತ ರಸ ಧಾರೆ ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆಯನ್ನು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ದ ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಅವರು ಬಿಡುಗಡೆಗೊಳಿಸಿದರು. ಕಳೆದ 31 ವರ್ಷಗಳಿಂದ ಸ್ವಾತಂತ್ರ್ಯ ದಿನದಂದು ಸುಧಾಕರ ಆಚಾರ್ಯ ಅವರು ನಡೆಸಿಕೊಂಡು ಬರುತ್ತಿರುವ ಈ ಯಕ್ಷಗಾನ ಕಾರ್ಯಕ್ರಮ ಬರಿದೆ ಕಲಾಸೇವೆ ಆಗಿರದೇ ಸನ್ಮಾನ, ಸಹಾಯ ಹೀಗೆ ಅನ್ಯಾನ್ಯ ರೂಪಗಳಲ್ಲಿ ವಿಸ್ತರಿಸಿದೆ. ಇಂತಹ ಕಲಾಸೇವೆಯಿಂದ ಸಾಂಸ್ಕೃತಿಕ ರಂಗ ಇನ್ನಷ್ಟು ಬೆಳಗಲಿ ಎಂದರು.
ಮಹಿಳಾ ಭಾಗವತರಿಂದ ಯಕ್ಷಗಾನ ಸ್ವರಾಮೃತ, ಬಳಿಕ ಯಕ್ಷಗಾನ ಪರಂಪರಾಮೃತ, ಯಕ್ಷಗಾನ ಗೀತಾಮೃತ, ಯಕ್ಷಗಾನ ವಾಗರ್ಥಾಮೃತ, ಭರತ ಯಕ್ಷ ನೃತ್ಯಾಮೃತ, ಯಕ್ಷಗಾನ ಕಥಾಮೃತ ಇಷ್ಟು ಕಾರ್ಯಕ್ರಮ ಗಳು ಆ ದಿನ ನಡೆಯಲಿವೆ.ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಸಂಘಟಕ ಸುಧಾಕರ ಆಚಾರ್ಯ ತಿಳಿಸಿದರು.
ವಾಮನ ಉಪಾಧ್ಯಾಯ, ವಿಷ್ಣುಮೂರ್ತಿ ಕಾರಂತ ತೆಕ್ಕಟ್ಟೆ ಉಪಸ್ಥಿತರಿದ್ದರು.
ಮಹಾಗಣಪತಿಯ ಸನ್ನಿಧಿಯಲ್ಲಿ ಆಮಂತ್ರಣ ಪತ್ರವನ್ನು ಇಟ್ಟು ಪೂಜಿಸಿ, ಪ್ರಾರ್ಥಿಸಿ ಬಳಿಕ ಬಿಡುಗಡೆಗೊಳಿಸಲಾಯಿತು.