ಕುಂದಾಪುರ ಮಿರರ್ ಸುದ್ದಿ…
ಕೋಟ: ವರಮಹಾಲಕ್ಷ್ಮೀ ವೃತದ ಅಂಗವಾಗಿ ಶ್ರೀ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ,ಸಹಸ್ರ ಕುಂಕುಮಾರ್ಚನೆ,ಅಪರಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೆರಿತು.
ಪೂರ್ವಾಹ್ನದಿಂದ ಸಾಕಷ್ಟು ಭಕ್ತಾಧಿಗಳು ಶ್ರೀ ದೇವಿಯ ದರ್ಶನ ಪಡೆದು, ವಿವಿಧ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ,ಟ್ರಸ್ಟಿಗಳಾದ ಸುಶೀಲಸೋಮಶೇಖರ್,ಚಂದ್ರ ಪೂಜಾರಿ ಕದ್ರಿಕಟ್ಟು ಭಕ್ತಾಧಿಗಳಿಗೆ ವರಮಹಾಲಕ್ಷ್ಮೀ ಜೂಜಾ ಭಾಗಿನ ಪ್ರಸಾದ ವಿತರಿಸಿದರು.ದೇವಿಗೆ ವಿಶೇಷ ಅಲಂಕಾರದ ನಡುವೆ ಕೊಡಗಿನ ಕೊಣಿಕೊಪ್ಪದ ಭಕ್ತಾದಿ ಅಪರ್ಣಾ ಸುಬ್ಬಯ್ಯ, ರೋಹಿತ್ ಗೋಪಾಲ್ ಗಾಣಿಗ,ಭರತ್ ಗಾಣಿಗ,ದೇವೆಂದ್ರ ಗಾಣಿಗ ಚಂದ್ರಮ್ಮ ಕದ್ರಿಕಟ್ಟು, ಭರತ್ ಬೆಂಗಳೂರು ಅನ್ನ ಪ್ರಸಾದದ ಸೇವಾಕರ್ತರಾಗಿ ಪಾಲ್ಗೊಂಡರು.