ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜಪ್ತಿಯ ಪ್ರಥಮ್ ಇನ್ ರೆಸಾರ್ಟ್ ಪ್ರಾಯೋಜಕತ್ವದಲ್ಲಿ ನಮ್ಮೂರ ಸಾಂಸ್ಕೃತಿಕ ವೈಭವ ಎನ್ನುವ ವಿನೂತನ ಕಾರ್ಯಕ್ರಮ ಆ.6 ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘದ ಒಕ್ಕೂಟ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿ ಉದ್ಘಾಟಿಸಿದರು. ಪ್ರಥಮ್ ರೆಸಾರ್ಟ್‍ನ ಆವರಣದಲ್ಲಿನ ಗದ್ದೆಯನ್ನು ನಾಟಿಗೆ ಹದಗೊಳಿಸಿ ನೇಜಿಯನ್ನು ಸಿದ್ಧಗೊಳಿಸಲಾಗಿತ್ತು. ನಾಟಿ ಪೂರ್ವದಲ್ಲಿ ಕೆಸರು ಗದ್ದೆಯಲ್ಲಿ ಕಂಬಳೋತ್ಸವ ನಡೆಯಿತು. ಕೆಸರು ಗದ್ದೆಯಲ್ಲಿ ಆಲೂರು ಶೇಖರ ಶೆಟ್ಟಿಯವರ ಕಂಬಳ ಕೋಣಗಳ ಓಟ, ಕೆನೆ ಹಲಗೆ ಓಟ ನಡೆಯಿತು. ಬಳಿಕ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ನಡೆಯಿತು.
ಕಂಡ್ಲೂರು ರಾಮ್ಸನ್ ಪ್ರೌಢಶಾಲೆಯ ಪ್ರೇರಣಾ ಇಕೋ ಕ್ಲಬ್‍ನ ವಿದ್ಯಾರ್ಥಿಗಳು ಸಿದ್ಧ ಪಡಿಸಲಾದ ಕೆಸರು ಗದ್ದೆಯಲ್ಲಿ ನಾಟಿ ಮಾಡುವ ನಾಟಿ ಮಾಡಿದರು. ವಿದ್ಯಾರ್ಥಿಗಳಲ್ಲಿ ಕೃಷಿ ಸಂಸ್ಕೃತಿ ಹಾಗೂ ಆಸಕ್ತಿಯನ್ನು ವೃದ್ಧಿಸುವ ಸಲುವಾಗಿ ನಾಟಿ ಕಾರ್ಯ ಪರಿಣಾಮಕಾರಿಯಾಗಿತ್ತು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯ ಕರ್ನಾಟಕ ಜನಪರ ವೇದಿಕೆ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಸದಾನಂದ ಶೆಟ್ಟಿ ಮುಂಬಯಿ, ಲೋಟೋಸ್ ಬಿಲ್ಡರ್ಸ್‍ನ ಸಂತೋಷ್ ಶೆಟ್ಟಿ, ಜಿತೇಂದ್ರ ಕೊಠಾರಿ, ರಾಮ್ಸನ್ ಪ್ರೌಢಶಾಲೆಯ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಸಾಮ್ರಾಟ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ಭಟ್, ಜಗದೀಶ ಶೆಟ್ಟಿ, ವಿಜಯ ಶೆಟ್ಟಿ, ಸಂತೋಷ್, ಸುಧೀರ್ ಶೆಟ್ಟಿ, ಕಿರಣ್ ಬೆಂಗಳೂರು, ಲತೀಶ, ಅನಂತ್ ಕಾಮತ್, ಸುಧೀರ ಕುಮಾರ್, ಸಂಜೀವ ಶೆಟ್ಟಿ, ಡಾ.ಸತೀಶ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಥಮ್ ಇನ್ ರೆಸಾರ್ಟ್‍ನ ಆಡಳಿತ ನಿರ್ದೇಶಕ ಸುರೇಶ ಎನ್.ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕೃಷಿ ಹಾಗೂ ಈ ನೆಲದ ಸಂಸ್ಕøತಿಯನ್ನು ವಿದ್ಯಾರ್ಥಿಗಳು ಮರೆಯಬಾರದು. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಶ್ರದ್ದೆಯಿಂದ ಪರಿಶ್ರಮಪಟ್ಟು ತಲುಪಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ 610 ಅಂಕ ಗಳಿಸಿ ಶೇರ್ ಬಹದ್ದೂರ್, ಪಿಯುಸಿಯಲ್ಲಿ 574 ಅಂಕಗಳಿಸಿದ ಸುನೀತಾ, ಪ್ರಸ್ತುತ ಸಿ.ಎ ವ್ಯಾಸಂಗ ಮಾಡುತ್ತಿರುವ ಮನೋಜ್ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಸದಾನಂದ ಶೆಟ್ಟಿಯವರು ಕ್ವೀಜ್ ಕಾರ್ಯಕ್ರಮ ನಡೆಸಿ ನಗದು ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕೊಡ್ಲಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಕುಂಬಾರಮಕ್ಕಿ ಶಾಲೆಯ ದಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.