ಕುಂದಾಪುರ ಮಿರರ್ ಸುದ್ದಿ…
ಕೋಟ : ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸುವ ಹಾಗೂ ಪ್ರಜಾಪ್ರಭುತ್ವವನ್ನು ಸಾರುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕೋಟ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ 75 ನೇ ಸ್ವಾತಂತ್ರ್ರೋತ್ಸವದ ಅಮೃತಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರ ಯೋಧರ ತ್ಯಾಗ ಬಲಿದಾನವನ್ನು ನೆನಪಿಸುವ ಹಾಗೂ ಶಾಂತಿ ಸಾಮರಸ್ಯದ ದೇಶಪ್ರೇಮದ ಸಂದೇಶವನ್ನು ಸಾರುವ ಸಲುವಾಗಿ ಸಾಲಿಗ್ರಾಮದಿಂದ ಕೋಟ ಮಾರ್ಗವಾಗಿ ತೆಕ್ಕಟ್ಟೆವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಕುರಿತಾಗಿ ಹಮ್ಮಿಕೊಂಡ ಹರ್ ಘರ್ ತಿರಂಗ ಘೋಷಿಸಲು ಬಿಜೆಪಿಗೆ ನೈತಿಕತೆ ಇಲ್ಲ ಜನಸಾಮಾನ್ಯರ ಸ್ವಾತಂತ್ರ್ಯವನ್ನೇ ಕಸಿದು ಆಡಳಿತ ನಡೆಸುವ ಪಕ್ಷ ಸ್ವಾತಂತ್ರದ ಬಗ್ಗೆ ಉಲ್ಲೇಖಿಸುವುದು ಅದರ ಕುರಿತು ಕಾರ್ಯಕ್ರಮ ಆಯೋಜಿಸುವುದು ಎಷ್ಟು ಸೂಕ್ತ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಅದರ ಜೊತೆಗೆ ಕಳೆದ 60ವರ್ಷಗಳಿಂದ ಸಂವಿಧಾನ ಬದ್ಧವಾದ ಆಡಳಿತ ನಡೆಸಿಕೊಂಡು ಬಂದಿದೆ. ಬಡವರ ಬಗ್ಗೆ ಕಾಳಜಿ ಕಾರ್ಯಕ್ರಮಗಳನ್ನು ಸದಾ ನೀಡಿದೆ. ಬಿಜೆಪಿ ಗಾಂಧಿ ಹತ್ಯೆಗೈದ ಗೋಡ್ಸೆ ದೇವಾಲಯ ಕಟ್ಟಲು ಶ್ರಮಿಸುತ್ತದೆ, ನೆಹರು,ಇಂದಿರಾ,ರಾಜೀವ್ ಗಾಂಧಿ ಹೀಗೆ ಹಲವು ನಾಯಕರುಗಳು ಈ ದೇಶಕ್ಕಾಗಿ ಸದಾ ಶ್ರಮಿಸಿದ ನಾಯಕರುಗಳು ಆದರೆ ಇಂಥಹ ಮಹಾನ್ ನಾಯಕರಗಳ ಬಗ್ಗೆ ಈಗಿನ ಆಡಳಿತ ಪಕ್ಷ ಗುಬೆ ಕುರಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದರು.
ಇನ್ನು ಪ್ರಸ್ತುತ ವರ್ಷಗಳ ಆಡಳಿತಕ್ಕೆ ಜನಸೋತು ಹೋಗಿದ್ದಾರೆ. ಬಿಜೆಪಿ ಪಕ್ಷ ಕೊಲೆಗಡುಕರ ಪಕ್ಷವಾಗಿ ಜನಸಾಮಾನ್ಯರು ಭಯದ ನೆರಳಿನಲ್ಲಿ ಬದುಕುವಂತೆ ಮಾಡಿದ್ದಾರೆ. ಕರಾವಳಿಯಲ್ಲಿ ಶಾಂತಿ ಕದಡುವ ಕೆಲಸ ಮಾಡಿ ಅಲ್ಲಿ ಒಂದು ಸಮುದಾಯವನ್ನು ಒಲೈಸುವ ಕೆಲಸ ಮಾಡುತ್ತಿದೆ ಒರ್ವ ಮುಖ್ಯಮಂತ್ರಿಯಾಗಿ ಪ್ರವೀಣ್ ಮನೆಗೆ ಹೋಗುತ್ತಾರೆ ಆದರೆ ಮಸೂದ್, ಫೈಝಲ್ ಎನು ಮಾಡಿದ್ದಾರೆ. ಸಂವಿಧಾನ ಬದ್ಧವಾದ ನ್ಯಾಯ ಎಲ್ಲರಿಗೂ ಸಿಗಬೇಕು ಎಂದು ಮುಖ್ಯ ಮಂತ್ರಿಗಳ ಕಾರ್ಯವೈರಿಯನ್ನು ಛೇಡಿಸಿದರು. ಇಂಥವರಿಂದ ಸ್ವಾತಂತ್ರ್ಯ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ಕಾಂಗ್ರೆಸ್‍ಗೆ ಇಲ್ಲ, ಇತ್ತೀಚಿಗೆ ನಮ್ಮ ಮಾಜಿಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹುಟ್ಟುಹಬ್ಬದ ಜನಸ್ತೋಮ ನೋಡಿ ಮಡುಗಟ್ಟಿ ಹೋಗಿದ್ದಾರೆ ಇದೊಂದು ಇತಿಹಾಸ ಸೃಷ್ಠಿ ಮಾಡಿದೆ ಬದಲಾವಣೆ ಪರ್ವ ಆರಂಭಗೊಂಡಿದೆ ಎಂದರಲ್ಲದೆ ಸ್ವಾತಂತ್ರ್ಯದ ನೈಜ ಪರಿಭಾಷೆಯನ್ನು ಅರ್ಥಪೂರ್ಣಗೊಳಿಸಲು ಕಾಂಗ್ರೆಸ್ ರಾಷ್ಟ್ರದಲ್ಲಿ ಹಮ್ಮಿಕೊಂಡ ಈ ಪಾದಯಾತ್ರೆ ಎಲ್ಲಾ ಭಾಗಗಳಿಂದ ಯಶಸ್ಸಿನ ಹಂತ ತಲುಪಿದೆ ಎಂದಿದ್ದಾರೆ.
ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ, ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಎ ಗಫೂರ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರದಾನಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರುಗಳಾದ ದೇವಕಿ ಸಣ್ಣಯ್ಯ, ಮಮತಾ ದೇವಾಡಿಗ, ಹೆರಿಯಣ್ಣ ಚಾತ್ರಬೆಟ್ಟು, ರೋನಿ ಉಡುಪಿ, ರೋಶನಿ ಒಲೆವೇರ, ಇಚ್ಛಿತಾರ್ಥ ಶೆಟ್ಟಿ, ಉಸ್ತಾದ್ ಅಹಮದ್, ಸತೀಶ್ ಶೆಟ್ಟಿ, ದೇವಾನಂದ್ ಶೆಟ್ಟಿ, ವಿಕಾಸ್ ಹೆಗ್ಡೆ, ಅಜಿತ್ ಶೆಟ್ಟಿ, ರಾಜು ಪೂಜಾರಿ ಪಾರಂಪಳ್ಳಿ, ಶ್ರೀನಿವಾಸ್ ಅಮೀನ್, ಬಾಲಕೃಷ್ಣ ಪೂಜಾರಿ, ಮಲ್ಲಿಕಾ ಪೂಜಾರಿ, ದಿನೇಶ್ ಬಂಗೇರ, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿನೋದ್ ಕ್ರಾಸ್ತಾ ನಿರೂಪಿಸಿದರು.
ಈ ಮೊದಲು ಕೋಟ ಬ್ಲಾಕ್ ಕಾಂಗ್ರೆಸ್ ಇಂದಿರಾ ಕಚೇರಿಯಿಂದ ಹೊರಟು ಸಾಲಿಗ್ರಾಮದ ಪೇಟೆಯ ಆಂಜನೇಯ ದೇವಸ್ಥಾನದ ಮಾರ್ಗದ ಮೂಲಕ ಹಾದುಹೋಗಿ ಕೋಟತಟ್ಟು ಕೋಟಮಾರ್ಗವಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್‍ನ ತೆಕ್ಕಟ್ಟೆಯಲ್ಲಿ ಪಾದಯಾತ್ರೆ ಸಮಾಪನಗೊಂಡಿತು.ತನ್ನ ಕಾಲುನೋವಿನ ನಡುವೆಯಲ್ಲೂ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.