ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರು ಕ್ಷೇತ್ರದಲ್ಲಿ ಕಳೆದ ೭೦ ವರ್ಷದಿಂದ ಆಗದಿರುವ ರಸ್ತೆ, ಕಿಂಡಿ ಅಣೆಕಟ್ಟು, ಶಾಲೆ ದುರಸ್ತಿಯಂತಹ ಅಭಿವೃದ್ಧಿಯಾಗಿದೆ. ಮುಂದಿನ ತಿಂಗಳಿನಿಂದ ಪ್ರತಿ ಪಂಚಾಯತಿನಲ್ಲೇ ೯೪ ಸಿಯಡಿ ಅರ್ಜಿ ಹಾಕಿದವರಿಗೆ ಹಕ್ಕುಪತ್ರ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯ ವಾಲ್ತೂರು – ದೂಪದಕಟ್ಟೆಯ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ, ಮಾತನಾಡಿದರು.
ಕುಡಿಯುವ ನೀರಿನ ಯೋಜನೆಗೆ ೬೦೦ ಕೋ.ರೂ. ಅನುದಾನ ಬಂದಿದ್ದು, ಬೈಂದೂರಿನ ಎಲ್ಲ ೫೯ ಸಾವಿರ ಮನೆಗೂ ನೀರು ಕೊಡುವ ಮಹತ್ವಾಪೂರ್ಣ ಯೋಜನೆ ಇದಾಗಿದೆ. ಬೆಳಕು ಯೋಜನೆಯಡಿಯಲ್ಲಿ ಅರ್ಜಿ ಹಾಕಿ, ಯಾರಿಗಾದರೂ ಸೌಲಭ್ಯ ದೊರಕದೇ ಇದ್ದಲ್ಲಿ, ನನ್ನ ಗಮನಕ್ಕೆ ತನ್ನಿ ಎಂದ ಅವರು, ಕಾಲ್ತೋಡಿನಲ್ಲಿ ೮ ತಿಂಗಳ ಹಿಂದೆಯೇ ಕಾಲು ಸಂಕ ಮಂಜೂರಾಗಿತ್ತು. ಪ್ರತಿ ಮನೆಗೆ ಕಾಲು ಸಂಕ ಕಷ್ಟ. ಆದರೆ ಅಗತ್ಯವಿರುವ ಕಡೆಗಳಲ್ಲಿ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವನಾಥ್ ದೇವಾಡಿಗ, ಶ್ಯಾಮಲ ಸಾರ್ಕಲ್, ಶ್ಯಾಮಲ, ಜ್ಯೋತಿ ಎನ್. ಪುತ್ರನ್, ರಾಜಶ್ರೀ ಶೇಟ್, ಶಿವ ಮೊಗವೀರ, ಕಂಡ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಜೋರ್ ಮಕ್ಕಿ, ನಿವೃತ್ತ ಮುಖೋಪಾಧ್ಯಾಯ ನಾರಾಯಣ ಗಾಣಿಗ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸೀತಾರಾಮ್ ಶೆಟ್ಟಿ, ರವಿರಾಜ್ ಶೆಟ್ಟಿ, ಪೆಡುವಾಲ್ತೂರು ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಪ್ರಭಾಕರ್ ಶೆಟ್ಟಿ, ಸಂದೇಶ್ ಶೆಟ್ಟಿ, ರಾಮ್ಸನ್ ಶಾಲೆಯ ಎಸ್‌ಡಿಎಮ್‌ಸಿ ಸದಸ್ಯ ರಾಘವೇಂದ್ರ ಶೆಟ್ಟಿ, ಸಾಧು ಶೆಟ್ಟಿ ಸಾರ್ಕಲ್, ಕರಿಯ ಕೊಠಾರಿ, ಶ್ರೀಕಾಂತ್ ಭಟ್, ಸತೀಶ್ ಶೆಟ್ಟಿ, ಹರೀಶ್ ಶೆಟ್ಟಿ, ನಾಗಪ್ಪ ಪೂಜಾರಿ, ಮೂಡುವಾಲ್ತೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಯಶೋದಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾವ್ರಾಡಿ ಗ್ರಾ.ಪಂ.ಸದಸ್ಯ ಪ್ರಕಾಶಚಂದ್ರ ಶೆಟ್ಟಿ ಸ್ವಾಗತಿಸಿ, ವಂದಿಸಿದರು.