ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿಯ ಹಳ್ಳಾಡು ಗ್ರಾಮದ ಕಂಡ್ಲೂರು ಸಮೀಪದ ಮುಳ್ಳುಗುಡ್ಡೆಯ ದಿ| ಕಾವ್ರಾಡಿ ರಾಜೀವ ಶೆಟ್ಟಿ ಎನ್‌ಕ್ಲೇವ್‌ನಲ್ಲಿ ನೂತನವಾಗಿ ಆರಂಭಗೊಂಡ ರಾಯಲ್ ವಿಂಟೇಜ್ ಫ್ಯಾಮಿಲಿ ರೆಸ್ಟೋರೆಂಟ್ ರವಿವಾರ ಉದ್ಘಾಟನೆಗೊಂಡಿತು.
ಉದ್ಘಾಟಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಮಾತನಾಡಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಬಗೆಬಗೆಯ ಖಾದ್ಯ ನೀಡುವ ಮೂಲಕ ಈ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದ ಅವರು, ಹಳ್ನಾಡು ಪ್ರದೇಶ ಯಾವುದೇ ತಕರಾರು ಇಲ್ಲದೆ, ಜನರು ಒಗ್ಗಟ್ಟಿನಲ್ಲಿ ಇರುವ ಗ್ರಾಮ. ಇಂತಹ ಪ್ರದೇಶದಲ್ಲಿ ರೆಸ್ಟೋರೆಂಟ್ ಉದ್ಯಮ ಯಶಸ್ಸು ಹೊಂದಲಿ ಎಂದು ಶುಭ ಹಾರೈಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಆಗಮಿಸಿ ಶುಭ ಹಾರೈಸಿದರು.
ಕಾವ್ರಾಡಿ ಗ್ರಾ.ಪಂ. ವಿಜಯ ಪುತ್ರನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಜಾಗತಿಕ ಬಂಟರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಹಳ್ನಾಡು ಶ್ರೀ ಅರ್ಭಕ ಸಹಿತ ಹೊಳ್ಳಾಡಿ ಸನ್ನಿಧಿಯ ಮೊಕ್ತೇಸರರು ಸದಾಶಿವ ಶೆಟ್ಟಿ ದೊಡ್ಡನೆ, ಕುಂದಾಪುರ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ| ವಸಂತ್ ಕುಮಾರ್ ಶೆಟ್ಟಿ ಅಂಪಾರು, ಮಾಜಿ ಜಿ.ಪಂ. ಸದಸ್ಯ ದೇವಾನಂದ ಶೆಟ್ಟಿ, ಸಿ.ಎ. ಶಾಂತಾರಾಮ್ ಶೆಟ್ಟಿ,
ರಾಯಲ್ ವಿಂಟೇಜ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲಕರಾದ ಕಾಮರಾಜ್ ಶೆಟ್ಟಿ ಹಳ್ನಾಡು ದೊಡ್ಡನೆ ಹಾಗೂ ರಶ್ಮಿಕೆ. ಶೆಟ್ಟಿ ಉಪಸ್ಥಿತರಿದ್ದರು.
ಭಡ್ತಿಬೈಲು ಭುಜಂಗ ಶೆಟ್ಟಿ ಸ್ವಾಗತಿಸಿ, ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಂಡ್ಲೂರು ರಾಮ್ಸನ್ ಶಾಲೆಯ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರು.