ಕುಂದಾಪುರ ಮಿರರ್ ಸುದ್ದಿ…
ಕೋಟ: ರೈತರನ್ನು ಗುರುತಿಸುವ ಕಾರ್ಯಕ್ರಮ ನಿಜಕ್ಕೂ ಪ್ರಶಂಸನೀಯ ಕಾರ್ಯ ಎಂದು ಕುಂದಾಪುರದ ಹಿರಿಯ ಪತ್ರಕರ್ತ ಕೆ.ಜಿ ವೈದ್ಯ ಹೇಳಿದ್ದಾರೆ.
ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ ,ಮಣೂರು ಫ್ರೆಂಡ್ಸ್ ,ಗೆಳೆಯರ ಬಳಗ ಕಾರ್ಕಡ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ,ರೈತಧ್ವನಿ ಸಂಘ ಕೋಟ, ಗೀತಾನಂದ ಫೌಂಡೇಶನ್‍ಮಣೂರು ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 18ನೇ ಸರಣಿ ಕಾರ್ಯಕ್ರಮದಲ್ಲಿ ಕೆದೂರು ಶಾನಾಡಿ ರಾಮಚಂದ್ರ ಭಟ್ ಇವರನ್ನು ಸನ್ಮಾನಿಸಿ ಮಾತನಾಡಿ ರೈತರ ಬಗ್ಗೆ ಕಾಳಜಿ ಪ್ರತಿಯೊರ್ವರಿಗೂ ಇರಬೇಕಾದ ಅಗತ್ಯತೆ ಪ್ರಸ್ತುತ ದಿನಗಳಲ್ಲಿದೆ.ಆದರೆ ಸರಕಾರಗಳು ರೈತಪರವಾಗಿ ಯೋಜನೆಗಳನ್ನು ರೂಪಿಸಬೇಕು ಆ ಮೂಲಕ ಕೃಷಿ ಕಾಯಕಕ್ಕೆ ಉತ್ತೇಜನ ನೀಡಬೇಕು ಎಂದರಲ್ಲದೆ ಇಂದು ಗೌರವಿಸುತ್ತಿರುವ ರಾಮಚಂದ್ರ ಭಟ್ಟರು ಇಡೀ ವ್ಯವಸ್ಥೆಗೆ ಮಾದರಿ ಬದುಕಿನ ಕಾಯಕ ನಡೆಸುತ್ತಿದ್ದಾರೆ.ಅವರ ಸುತ್ತಮುತ್ತ ಹಸಿರು ಕ್ರಾಂತಿಯಿಂದ ಕಂಗೊಳಿಸುವ ವ್ಯವಸಾಯ ಪದ್ಧತಿ,ಅವರ ಆಲಮನೆ ಬೆಲ್ಲ ಜಿಲ್ಲೆಯಲ್ಲೆ ಪ್ರಸಿದ್ಧಿ ಪಡೆದಿದೆ.ಇಂಥ ಸಾಧಕರನ್ನು ಹುಡುಕಿ ಗೌರವಿಸುವ ಸಂಘಸಂಸ್ಥೆಗಳನ್ನು ಶ್ಲಾಘಿಸಿದರು.
ರೈತಧ್ವನಿ ಸಂಘ ಕೋಟ ಇದರ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಮಾತನಾಡಿ ಸರಕಾರಗಳು ರೈತಾಪಿವರ್ಗಗಳ ಹಿತವನ್ನು ಕಾಯುವ ಕೆಲಸ ಮಾಡಬೇಕು,ಆಯಾ ಕಾಲಕ್ಕೆ ಅನುಗುಣವಾಗಿ ಬೆಳೆದ ಬೆಳೆಗಳಿಗೆ ನೈಜ ಬೆಲೆಯನ್ನು ಫೆÇೀಷಿಸುವ ಕೆಲಸ ಮಾಡಬೇಕು ಆಗಮಾತ್ರ ಹೆಚ್ಚು ಹೆಚ್ಚು ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಲು ಸಾಧ್ಯ,ಅದೇ ರೀತಿ ಕೃಷಿ ಎಂದೂ ನಶಿಸಬಾರದು ಎಂಬ ಬಯಕೆ ಇದ್ದರೆ ನಮ್ಮ ನಮ್ಮ ಮನೆಯ ಮಕ್ಕಳನ್ನು ಹೆಚ್ಚು ಕೃಷಿ ಕೆಲಸದಲ್ಲಿ ನಿರತರಾಗಲು ಪೋಷಕರು ಪ್ರಯತ್ನಿಸಬೇಕು ಆಗ ಮಾತ ಕೃಷಿಯನ್ನು ನಿತ್ಯನಿರಂತವಾಗಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿರಿಯ ಕೃಷಿಕ ಶಾನಾಡಿ ರಾಮಚಂದ್ರ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿದರೆ,ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಪಂಚವರ್ಣ ಮಹಿಳಾ ಮಂಡಲದ ಪ್ರೇಮಾ ಆಚಾರ್ಯ ವಂದಿಸಿದರು.
ವಿವಿಧ ಕೃಷಿ ಪರಿಕರ ನೀಡುವುದರ ಜೊತೆಗೆ ಮನೆಗೊಂದು ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.