ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬಾಲ ಪ್ರತಿಭೆ ಕುಂದಾಪುರದ ಸಮೃದ್ದಿ ಎಸ್ ಮೊಗವೀರ ಝೀ ಕನ್ನಡ ವಾಹಿನಿ ನಡೆಸಿದ ಡ್ರಾಮಾ ಜೂನಿಯರ್ಸ್‌ನ ನಾಲ್ಕನೇ ಅವೃತ್ತಿಯಲ್ಲಿ ವಿಜೇತರಾಗಿದ್ದಾರೆ.
ಆ.21ರಂದು ಪ್ರಸಾರವಾದ ಡ್ರಾಮಾ ಜೂನಿಯರ್‍ಸ್‌ನ ಅಂತಿಮ ಸುತ್ತಿನ ಗ್ರ್ಯಾಂಡ್ ಫೈನಲ್‌ನಲ್ಲಿ ವಿಜೇತರನ್ನು ಘೋಷಿಸಲಾಯಿತು. ಸಮೃದ್ದಿ ಬೀಜಾಡಿಯ ಶ್ರೀಧರ ಮೊಗವೀರ ಮತ್ತು ಭಾರತಿ ಮೊಗವೀರ ದಂಪತಿಗಳ ಪುತ್ರಿ. ತೆಕ್ಕಟ್ಟೆಯ ಕುವೆಂಪು ಸರಕಾರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.
ಡ್ರಾಮಾ ಜೂನಿಯರ್ಸನ ಕಾರ್ಯಕ್ರಮಕ್ಕಾಗಿ ಕರ್ನಾಟಕದ 31 ಜಿಲ್ಲೆಗಳಲ್ಲಿ ಮೆಗಾ ಆಡಿಷನ್ ನಡೆಸಲಾಗಿದ್ದು, ಈ ಆಡಿಷನ್‌ನಲ್ಲಿ 15 ಸಾವಿರ ಮಕ್ಕಳು ಭಾಗವಹಿಸಿದ್ದು ಅದರಲ್ಲಿ ದಿ ಬೆಸ್ಟ್ ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು, ಫಿನಾಲೆಯಲ್ಲಿ ಟಾಪ್ ೧೫ ಸ್ಪರ್ಧಿಸಿದ್ದು, ಈ 15 ಸ್ಪರ್ಧಿಗಳಲ್ಲಿ ಸಮೃದ್ದಿ ಗೆಲುವಿನ ನಗೆ ಬೀರಿದ್ದಾರೆ.