ಕುಂದಾಪುರ ಮಿರರ್ ಸುದ್ದಿ…
ಕೊಲ್ಲೂರು: ಬೈಂದೂರು ತಾಲೂಕಿನ ಬೋಳಂಬಳ್ಳಿ ಗ್ರಾಮದ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿ ಪುತ್ರಿ ಸನ್ನಿಧಿ (8 ವ.) ಶಾಲೆ ಬಿಟ್ಟು ಮನೆಗೆ ಹಿಂದಿರುಗುವ ಸಂದರ್ಭ ಕಿರಿದಾದ ಕಾಲು ಸಂಕ ದಾಟುತ್ತಿದ್ದಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ನೀರುಪಾಲಾಗಿ ಸಾವನ್ನಪ್ಪಿದಳು.
ಲೋಕಸಭಾ ಸದ್ಯಸ್ಯ ಬಿ. ವೈ. ರಾಘವೇಂದ್ರ ಅವರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರೊಡನೆ ಪೋಷಕರನ್ನು ಭೇಟಿಮಾಡಿ ಧೈರ್ಯ ತುಂಬಿದರು. ಸಂಸದರು ವೈಯಕ್ತಿಕವಾಗಿ ನೊಂದ ಕುಟುಂಬಕ್ಕೆ ಧನ ಸಹಾಯ ಮಾಡಿದರು. ಈ ಸಂದರ್ಭ ಬೈಂದೂರು ಕ್ಷೇತ್ರ ಬಿ. ಜೆ.ಪಿ. ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಜಿ ಜಿ. ಪಂ. ಸದಸ್ಯರು, ಬಿ. ಜೆ.ಪಿ. ಮುಖಂಡರು ಉಪಸ್ಥಿತರಿದ್ದರು.