ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಲಯನ್ಸ್ ಕ್ಲಬ್ ಹಂಗಳೂರು ನೇತೃತ್ವದಲ್ಲಿ ನೋಬಲ್ ಪ್ರಶಸ್ತಿ ವಿಜೇತ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಮದರ್ ಥೆರೆಸಾ ಅವರ 112ನೇ ಜನ್ಮದಿನವನ್ನು ಆ. 26ರಂದು ಕುಂದಾಪುರದ ಹೋಟೆಲ್ ಶರೋನ್ ಕುಂದಾಪುರದಲ್ಲಿ ಆಚರಿಸಲಾಯಿತು.
ಫಿಲಿಪ್ ಡಿ’ಕೋಸ್ಟಾ ಅವರು ಮದರ್ ಥೆರೆಸಾ ಅವರ ಜೀವನ ಮತ್ತು ಮಾನವೀಯತೆಯ ಸೇವೆಗಳ ಕುರಿತು ಉಪನ್ಯಾಸ ನೀಡಿದರು. ಮತ್ತು ಅವರ ಆಲೋಚನೆಗಳು ಮತ್ತು ಸೇವೆಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಲಯನ್ಸ್ ಕ್ಲಬ್ ಹಂಗಳೂರು ಅಧ್ಯಕ್ಷ ರಜತ್ ಹೆಗ್ಡೆ ಸ್ವಾಗತಿಸಿದರು. ಎಲ್ .ಎನ್ .ವಿಲ್ಫ್ರೆಡ್ ಮಿನೇಜಸ್ ವಂದಿಸಿದರು.