ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಯುವಬಂಟರ ಸಂಘದ ದಶಮ ಸಂಭ್ರಮ-2022 ಪ್ರಶಸ್ತಿ ಪ್ರದಾನ ಇಲ್ಲಿನ ಯುವ ಮೆರಿಡಿಯನ್ ಸಭಾಭವನದಲ್ಲಿ ಆ.28 ರಂದು ನಡೆಯಿತು.
ಉದ್ಘಾಟಿಸಿದ ಮುಂಬಯಿ ಉದ್ಯಮಿ ತೋನ್ಸೆ ಆನಂದ ಶೆಟ್ಟಿ ಅವರು ಮಾತನಾಡಿ ಸೋಲೇ ಗೆಲುವಿನ ಮೂಲ. ಸೂರ್ಯ ಹೇಗೆ ಬೆಳಗಿ ಮುಳುಗುತ್ತಾನೋ ಹಾಗೇ ಮತ್ತೆ ಬೆಳಗುತ್ತಾನೆ. ಅದೇ ರೀತಿ ನೀವು ಸೋಲ್ತೀರಿ ಅಂತ ಭಯ ಬೇಡ. ಸೋತು ಗೆಲ್ಲುವವನೇ ನಿಜವಾದ ಸಾಧಕ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಪ್ರತಾಪ ಚಂದ್ರ ಶೆಟ್ಟಿ ಹಳ್ನಾಡು ಆರು ಬೇರೆ ಬೇರೆ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 112 ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು. ಉಳ್ಳವರು ಇಲ್ಲದವರ ನಡುವಿನ ಕೊಂಡಿಯಾಗಬೇಕು ಎನ್ನುವ ದೃಷ್ಟಿಯಲ್ಲಿ ಯುವ ಬಂಟರ ಸಂಘ ಕೆಲಸ ಮಾಡುತ್ತದೆ ಎಂದರು.
ಸಂಘದ ಗೌರವಾಧ್ಯಕ್ಷ ಬಿ. ಉದಯಕುಮಾರ್ ಶೆಟ್ಟಿ ಮಾತನಾಡಿ, ಮಾಂಗಲ್ಯ ಸೂತ್ರ, ಗೃಹಚೇತನ, ಆರೋಗ್ಯ ಭಾಗ್ಯ ಯೋಜನೆ ಮೊದಲಾದ ಯೋಜನೆಗಳನ್ನು ಯುವ ಬಂಟರ ಸಂಘ ಹಮ್ಮಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭ ದಕ್ಷ ಪೊಲೀಸ್ ಅಧಿಕಾರಿ ದಿನಕರ ಶೆಟ್ಟಿಯವರಿಗೆ ದಿ. ಮಧುಕರ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ 2022 ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಯುವಬಂಟರ ಸಂಘದ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ಹಿರಿಯ ಉದ್ಯಮಿ ಜಯಶೀಲ ಶೆಟ್ಟಿ ಫಾರ್ಚೂನ್ ಗ್ರೂಫ್ ಆಫ್ ಹೊಟೇಲ್ಸ್ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಮಿ ಎಂ.ಕರುಣಾಕರ ಶೆಟ್ಟಿ ಮಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಸಾಯಿರಾಧಾ ಗ್ರೂಪ್ ಮುಖ್ಯಸ್ಥ ಮನೋಹರ ಶೆಟ್ಟಿ, ಉದ್ಯಮಿ ಅಶೋಕ ಶೆಟ್ಟಿ ಸಂಸಾಡಿ, ಉದ್ಯಮಿಗಳಾದ ಕಮಲಕಿಶೋರ್ ಶೆಟ್ಟಿ ಬಿ.ವಿನಯ್‌ಕುಮಾರ್ ಶೆಟ್ಟಿ ಸಬ್ಬಾಡಿ ಮಂಜಯ್ಯ ಶೆಟ್ಟಿ, ದೇವಾನಂದ ಶೆಟ್ಟಿ ಹಾಡು,ಗೌರಾವಾಧ್ಯಕ್ಷ ಬಿ.ಉದಯಕುಮಾರ್ ಶೆಟ್ಟಿ, ಕಾರ್ಯದರ್ಶಿ ನಿತೀಶ ಶೆಟ್ಟಿ ಬನ್ನೂರು, ಕೋಶಾಧಿಕಾರಿ – ಅಕ್ಷಯ ಹೆಗ್ಡೆ ಮೊಳಹಳ್ಳಿ ವಿದ್ಯಾರ್ಥಿವೇತನ ಸಮಿತಿ ಸಂಚಾಲಕ ಸಂತೋಷ ಕುಮಾರ್ ಶೆಟ್ಟಿ ಹೈಕಾಡಿ, ಉದ್ಯಮಿ ಅಂಡಾರು ದೇವಿಪ್ರಸಾದ ಶೆಟ್ಟಿ ಕೆ.ರಮೇಶ ಶೆಟ್ಟಿ ಕುಚೂರು, ವತ್ಸಲಾ ದಯಾನಂದ ಶೆಟ್ಟಿ, ಬಿ.ಉದಯಕುಮಾರ್‌ಹೆಗ್ಡೆ ಡಾ| ಜಗದೀಶ ಶೆಟ್ಟಿ, ಆನಗಳ್ಳಿ ಕರುಣಾಕರ ಹೆಗ್ಡೆ ಶಶಿರೇಖಾ ಶೆಟ್ಟಿ, ಡಾ| ಕೆ.ಟಿ ಶಂಕರ ಶೆಟ್ಟಿ ಮುಂಬಯಿ, ರತ್ನಾಕರ ಜಿ.ಶೆಟ್ಟಿ ಮುಂಬಯಿ, ವಿಜಯಾನಂದ ಶೆಟ್ಟಿ ಹಾಡು, ಸತೀಶ ಶೆಟ್ಟಿ ಕಂದಾವರ, ಹುಂತ್ರಿಕೆ ಸುಧಾಕರ ಶೆಟ್ಟಿ, ಮುಂಬಯಿ ಉಪಸ್ಥಿತರಿದ್ದರು.
ದಶಮ ಸಂಭ್ರಮ ಪ್ರಶಸ್ತಿ ಪ್ರದಾನ
ಸ್ತ್ರೀರೋಗ ತಜ್ಞ ಡಾ|ರಂಜಿತ್ ಕುಮಾರ್ ಶೆಟ್ಟಿ ಕುಂದಾಪುರ, ತೋಟಗಾರಿಕಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಯಶೀಲ ಶೆಟ್ಟಿ ಮೊಳಹಳ್ಳಿ ಶಿಕ್ಷಣ ಕ್ಷೇತ್ರದ ಸಾಧಕ ಪ್ರೊ| ಮೊಳಹಳ್ಳಿ ಬಾಲಕೃಷ್ಣಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿರುವಡಾ| ರೇಖಾ ಬನ್ನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ವಂಡಬಳ್ಳಿ ಜಯರಾಮ ಶೆಟ್ಟಿ ಯಕ್ಷಗಾನಸಂಘಟಕಕಿಶನ್ ಹೆಗ್ಡೆ ಪಳ್ಳಿ ಸ್ಪೋದ್ಯೋಗದಲ್ಲಿ ಸಾಧನೆ ಮಾಡಿದ ವಸಂತಿ ಎಂ. ಶೆಟ್ಟಿಹುಣ್ಣೆಮಕ್ಕಿ, ಮಾಧ್ಯಮ ರಂಗದಲ್ಲಿ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪ್ರಗತಿಪರ ಕೃಷಿಕ ಮಂಜುನಾಥ ಶೆಟ್ಟಿ ಹೆಂಗವಳ್ಳಿ ರಾಷ್ಟ್ರಮಟ್ಟದ ಕ್ರೀಡಾಪಟು ಪ್ರಶಾಂತ ಶೆಟ್ಟಿ ಮುಖ್ಯಮಂತ್ರಿಗಳ ಪ್ರಶಸ್ತಿ ಪುರಸ್ಕೃತ ಪ್ರತಾಪಚಂದ್ರ ಶೆಟ್ಟಿ ಹಾಡು ಅವರನ್ನು ಸಮ್ಮಾನಿಸಲಾಯಿತು.
ಪ್ರತಿಭಾವಂತರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಯುವ ಸಾಧಕರಾದ ವೈಷ್ಣವಿ ಶೆಟ್ಟಿ ಕೃತಿಕಾ ಶೆಟ್ಟಿ ವಜೇಶ ವೀಣಾಧರ ಶೆಟ್ಟಿ ವೃಶಾನ್ ವೀಣಾಧರ ಶೆಟ್ಟಿ, ಆರ್ಯನ್ ಶೆಟ್ಟಿ ಸುಮಧುರ ಶೆಟ್ಟಿ, ನಿರೂಪ ಶೆಟ್ಟಿ, ಪ್ರತಿಭಾ ಶೆಟ್ಟಿ, ವೀನಸ್ ಎಸ್.ಶೆಟ್ಟಿ, ಭೂಮಿಕಾ ಶೆಟ್ಟಿ, ಪ್ರಸನ್ನ ಶೆಟ್ಟಿ ಅವರನ್ನು ಗುರುತಿಸಿ, ಸಮ್ಮಾನಿಸಲಾಯಿತು. ವಿದ್ಯಾರ್ಥಿವೇತನ ಸಮಿತಿ ಸಂಚಾಲಕ ಸಂತೋಷ ಕುಮಾರ್ ಶೆಟ್ಟಿ ಹೈಕಾಡಿ ಸ್ವಾಗತಿಸಿದರು. ಗೌರಾವಾಧ್ಯಕ್ಷ ಬಿ. ಉದಯಕುಮಾರ್ ಶೆಟ್ಟಿ ಯುವ ಮೆರಿಡಿಯನ್ ಪ್ರಾಸ್ತಾವಿಸಿದರು.
ಸತೀಶಚಂದ್ರ ಶೆಟ್ಟಿ ಚಿತ್ರಪಾಡಿ ಹಾಗೂ ಪ್ರತಾಪಚಂದ್ರ ಶೆಟ್ಟಿ ಹಾಡು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆಸರೆ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಯಿತು.