ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಮತ್ತು ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು, ಸುಣ್ಣಾರಿ ಇವರ ಸಹಯೋಗದೊಂದಿಗೆ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸುಣ್ಣಾರಿಯ ಎಕ್ಸಲೆಂಟ್ ಕಾಲೇಜು ಆವಣರದಲ್ಲಿ ನಡೆಯಿತು.
ಪ್ರತಿಭಾ ಕಾರಂಜಿಯನ್ನು ಅಸಿಸ್ಟೆಂಟ್ ಕಮೀಷನರ್ ರಾಜು.ಕೆ ಉದ್ಘಾಟಿಸಿ ಮಾತನಾಡಿ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಉಕ್ತಿಯಂತೆ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಸಾಧ್ಯವಾಗುತ್ತದೆ. ಅಲ್ಲದೆ ವಿದ್ಯಾರ್ಥಿಯು ಸಾಧನೆ ಮಾಡಲು ಏಕಾಗ್ರತೆ ಮತ್ತು ಸಮಯ ಪ್ರಜ್ಞೆ ಮುಖ್ಯವಾಗಿದೆ. ಇವೆರಡನ್ನೂ ಮೈಗೂಡಿಸಿಕೊಂಡರೆ ಸಾಧನೆಯ ದಾರಿ ಸುಗಮವಾಗುತ್ತದೆ ಎನ್ನುವುದನ್ನು ತಮ್ಮ ಸಾಧನೆಯ ಅನುಭವದ ಯಶೋಗಾಥೆಯನ್ನು ಮಕ್ಕಳಿಗೆ ರಸವತ್ತಾಗಿ ಕಥೆಯ ಮೂಲಕ ತಿಳಿಸಿದರು.
ಪ್ರಾಸ್ತವಿಕವಾಗಿ ಅಶೋಕ್ ನಾಯಕ್ ಕ್ಷೇತ್ರ ಸಮನ್ವಯಾಧಿಕಾರಿಗಳು ಕುಂದಾಪುರ ವಲಯ ಇವರು ಮಾತನಾಡುತ್ತಾ “ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ನಾವು ಸ್ಪರ್ಧಾ ಮನೋಭಾವನೆಯನ್ನು ಎಳವೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿ ಸ್ಪರ್ಧೆಯ ನಿಯಮಗಳು ಹಾಗೂ ತೀರ್ಪುಗಾರರ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ ಎಲ್ಲಾ ಸ್ಪರ್ಧಾಳುಗಳಿಗೆ ಶುಭವನ್ನು ಕೋರಿದರು.
ಕಾರ್ಯಕ್ರಮದಲ್ಲಿ ದಿನಕರ ಶೆಟ್ಟಿ ಅಂಪಾರು ಜಿಲ್ಲಾ ಅಧ್ಯಕ್ಷರು ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆ ಇವರು “ಮಕ್ಕಳ ಪ್ರತಿಭಾ ಕಾರಂಜಿಯು ವ್ಯಕ್ತಿತ್ವ ವಿಕಸನಕ್ಕೆ ಜೀವಕಳೆ ತುಂಬುತ್ತದೆ. ವಿದ್ಯಾರ್ಥಿಯು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.”
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಎಕ್ಸಲೆಂಟ್ ಕಾಲೇಜು ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿಯವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ “ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಾದ ಪ್ರತಿಭಾಕಾರಂಜಿಯಂತಹ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಕರೆನೀಡಿ, ತೀರ್ಪುಗಾರರಿಗೆ ನಿಷ್ಪಕ್ಷಪಾತವಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಬೇಕೆಂದು ತಿಳಿಸಿದರು.”
ಪ್ರತಿಭಾ ಕಾರಂಜಿಯ ವೇದಿಕೆಯಲ್ಲಿ ಅಬ್ದುಲ್ ರವೂಫ್ ಮುಖ್ಯೋಪಾಧ್ಯಾಯರು ಹೆಸ್ಕೂತ್ತೂರು ಪ್ರೌಢಶಾಲೆ, ಗಣೇಶ್ ಕುಮಾರ್ ಶೆಟ್ಟಿ ಅಧ್ಯಕ್ಷರು ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಂದಾಪುರ ತಾಲೂಕು, ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯೋಪಾಧ್ಯಾನಿಯಾದ ಸುರೇಖಾ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಾಕಾರಂಜಿಯು ವಿಭಿನ್ನ ವೇದಿಕೆಯಲ್ಲಿ ನಡೆದು ಉತ್ತಮ ಪ್ರದರ್ಶನವನ್ನು ಸಮಗ್ರ ಪ್ರಶಸ್ತಿಯನ್ನು ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು.
ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸುರೇಖಾ ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕರಾದ ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕರಾದ ಶರತ್ ಕುಮಾರ್ ವಂದನಾರ್ಪಣೆ ಗೈದರು.
ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು ಮತ್ತು ಶಾಲೆ.
1 ರಿಂದ 4ನೇ ತರಗತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು.
ಕನ್ನಡ ಕಂಠಪಾಠ ‘ಸಾಂಚಿತ್’ ಸ.ಹಿ.ಪ್ರಾ ಶಾಲೆ ಹುಣ್ಸೆಮಕ್ಕಿ, ಇಂಗ್ಲೀಷ್ ಕಂಠಪಾಠ ‘ಅಕ್ಷರಾ ಎ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಸಂಸ್ಕೃತ ಧಾರ್ಮಿಕ ಪಠಣ ‘ಶ್ರೀವತ್ಸ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಅರೇಬಿಕ್ ಧಾರ್ಮಿಕ ಪಠಣ ‘ಮೊಹಮ್ಮದ್ ಸೈಶಾನ್’ ಸ.ಹಿ.ಪ್ರಾ ಶಾಲೆ ಯಡಾಡಿ-ಮತ್ಯಾಡಿ, ಚಿತ್ರ ಕಲೆ ಮತ್ತು ಬಣ್ಣ ಹಚ್ಚುವುದು ‘ಅಕ್ಷರಾ ಎ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಲಘು ಸಂಗೀತ ‘ಅದ್ವಿತ್’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಕ್ಲೇ ಮಾಡಲಿಂಗ್ ‘ವಿವೇಕ’ ಸ.ಹಿ.ಪ್ರಾ ಶಾಲೆ ಯಡಾಡಿ-ಮತ್ಯಾಡಿ, ಭಕ್ತಿಗೀತೆ ‘ಸಾಂಚಿತ್’ ಸ.ಹಿ.ಪ್ರಾ ಶಾಲೆ ಹುಣ್ಸೆಮಕ್ಕಿ, ಆಶುಭಾಷಣ ‘ಪಂಚಮಿ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಛದ್ಮವೇಷ ‘ವೇದಾಂತ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಅಭಿನಯ ಗೀತೆ ‘ಆಭರಣ’ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಯಡಾಡಿ-ಮತ್ಯಾಡಿ, ಕಥೆ ಹೇಳುವುದು ‘ಆರಾಧ್ಯ’ ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಯಡಾಡಿ-ಮತ್ಯಾಡಿ.
5 ರಿಂದ 7ನೇ ತರಗತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು.
ಕನ್ನಡ ಕಂಠಪಾಠ ‘ಆಶ್ರೀತಾ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಇಂಗ್ಲೀಷ್ ಕಂಠಪಾಠ ‘ತನ್ಮಯ್’ ಸ.ಹಿ.ಪ್ರಾ ಶಾಲೆ ಹುಣ್ಸೆಮಕ್ಕಿ, ಹಿಂದಿ ಕಂಠಪಾಠ ‘ಕಾರ್ತಿಕ್’ ಸ.ಹಿ.ಪ್ರಾ ಶಾಲೆ ಯಡಾಡಿ-ಮತ್ಯಾಡಿ, ಸಂಸ್ಕೃತ ಧಾರ್ಮಿಕ ಪಠಣ ‘ಪರ್ಣಿಕ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಅರೇಬಿಕ್ ಧಾರ್ಮಿಕ ಪಠಣ ‘ಸಫಾನ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಚಿತ್ರ ಕಲೆ ಮತ್ತು ಬಣ್ಣ ಹಚ್ಚುವುದು ‘ತನ್ಮಯ್’ ಸ.ಹಿ.ಪ್ರಾ ಶಾಲೆ ಹುಣ್ಸೆಮಕ್ಕಿ, ಹಾಸ್ಯ ‘ರಶ್ಮೀತಾ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಲಘು ಸಂಗೀತ ‘ಪ್ರಗತಿ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಕ್ಲೇ ಮಾಡಲಿಂಗ್ ‘ಪ್ರತೀಕ್ ಎಂ ಕೋಲಾರ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಭಕ್ತಿಗೀತೆ ‘ಅಸ್ವಿತಾ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಆಶುಭಾಷಣ ‘ಪ್ರಥಮ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಕನ್ನಡ ಭಾಷಣ ‘ಆಕಾಶ್ ಎ’ ವಿವೇಕೋದಯ ಅ.ಹಿ.ಪ್ರಾ ಶಾಲೆ ಹೊಂಬಾಡಿ-ಮಂಡಾಡಿ, ಛದ್ಮವೇಷ ‘ಪ್ರಥಮ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಅಭಿನಯ ಗೀತೆ ‘ಜಿ.ನಿಕಿತಾ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಕಥೆ ಹೇಳುವುದು ‘ಜಿ.ನಿಕಿತಾ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು.
8 ರಿಂದ 12ನೇ ತರಗತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳು.
ಕನ್ನಡ ಭಾಷಣ ‘ಶಾಧನಾ’ ಎಕ್ಸಲೆಂಟ್ ಹೈಸ್ಕೂಲ್ & ಕಾಲೇಜು ಸುಣ್ಣಾರಿ, ಇಂಗ್ಲೀಷ್ ಭಾಷಣ ‘ಸನ್ನಿಧಿ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಹಿಂದಿ ಭಾಷಣ ‘ವಿಖ್ಯಾತ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಸಂಸ್ಕೃತ ಭಾಷಣ ‘ಅನುಶ್ರೀ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಸಂಸ್ಕೃತ ಧಾರ್ಮಿಕ ಪಠಣ ‘ಸಮೃದ್ಧ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಅರೇಬಿಕ್ ಧಾರ್ಮಿಕ ಪಠಣ ‘ನುಜೈಫ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ರಂಗೋಲಿ ‘ಶ್ರೇಯಾ ಎಂ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಮಿಮಿಕ್ರಿ ‘ಸುಜಲ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಭಾವಗೀತೆ ‘ಹೆಚ್.ಸುವರ್ಣ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಜನಪದಗೀತೆ ‘ಆಧ್ಯಾ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಗಝಲ್ ‘ರಯಿದ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಭರತನಾಟ್ಯ ‘ಸುನೀಧಿ ಉಡುಪ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಹಾಸ್ಯ ‘ಅದ್ವಿತ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಛದ್ಮವೇಷ ‘ನಾಗರತ್ನ’ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ-ಮತ್ಯಾಡಿ. ಆಶುಭಾಷಣ ‘ಪ್ರತೀಕ್ಷಾ’ ಸ.ಹಿ.ಪ್ರಾ ಶಾಲೆ ಹೆಸ್ಕೂತ್ತೂರು, ಚಿತ್ರ ಕಲೆ ಮತ್ತು ಬಣ್ಣ ಹಚ್ಚುವುದು ‘ಆದಿತ್ಯ ಎನ್ ದೇವಾಡಿಗ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಚರ್ಚಾ ಸ್ಪರ್ಧೆ ‘ಮನಿಷ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ಕವ್ವಾಲಿ ‘ಅಕ್ಸಾ ಮತ್ತು ತಂಡ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ, ರಸಪ್ರಶ್ನೆ ‘ಅನಿರುದ್ಧ & ಶಶಾಂಕ್’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ. ಜನಪದ ನೃತ್ಯ ‘ಸುಜನ್ ರಾವ್ ಮತ್ತು ತಂಡ’ ಎಕ್ಸಲೆಂಟ್ ಹೈಸ್ಕೂಲು & ಕಾಲೇಜು ಸುಣ್ಣಾರಿ.