ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂಭಾಶಿ ಗ್ರಾಮದ ನಿವಾಸಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಹೆಗಡೆಯವರು ಇತ್ತೀಚೆಗೆ ಏಕಾಂಗಿಯಾಗಿ ಬೈಕ್ ಏರಿ ಕಾಶ್ಮೀರದವರೆಗೆ ಪ್ರಯಾಣಿಸಿ ಯಶಸ್ವಿಯಾಗಿ ಹಿಂತಿರುಗಿ ಬಂದ ಸಾಹಸಿ ಯುವತಿ ಸಾಕ್ಷಿ ಹೆಗಡೆ ಇವರನ್ನು ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಲಯನ್ಸ್ ಜಿಲ್ಲೆ 317Cನ ಮಾಜಿ ರಾಜ್ಯಪಾಲ ನೀಲಕಾಂತ ಎಂ ಹೆಗಡೆ ಯವರು ಸಾಕ್ಷಿ ಹೆಗಡೆ ಅವರಿಗೆ ಶಾಲು ಹೊಂದಿಸಿ ಫಲ ಪುಷ್ಪ ನೀಡಿ ಲಯನ್ಸ್ ಕ್ಲಬ್‌ನ ಪರವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್ಎಂ ಹೆಗಡೆಯವರು ಸಾಕ್ಷಿ ಹೆಗಡೆಯವರ ಸಾಧನೆ ಯುವತಿಯರಿಗೆ ಮಾದರಿಯಾಗಿದೆ ಅವರು ಇನ್ನೂ ಹೆಚ್ಚಿನ ಸಾಧನೆಗಳನ್ನ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಉಪ ರಾಜ್ಯಪಾಲ ಡಾ.ನೇರಿ ಕರ್ನೆಲಿಯೋ, ಭೋಜರಾಜ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಸುಜಯ್ ಹೆಗಡೆ, ಅಕ್ಷಯ್ ಹೆಗಡೆ ಉಪಸ್ಥಿತರಿದ್ದರು. ಕಲ್ಪನಾ ಭಾಸ್ಕರ್ ಸ್ವಾಗತಿಸಿದರು. ಸುಮಶ್ರೀ ಧನ್ಯ ಪ್ರಾರ್ಥಿಸಿ ಜಯಶೀಲಕಾಮತ್ ವಂದಿಸಿದರು. ಚಂದ್ರಿಕಾ ಧನ್ಯ ಕಾರ್ಯಕ್ರಮ ನಿರೂಪಿದರು.