ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮಗಳುದ ಅಂಗವಾಗಿ ರಕ್ತದಾನಿ ಸಾಲಿಗ್ರಾಮ ಪಾರಂಪಳ್ಳಿಯ ಶ್ರೀನಿವಾಸ ಪ್ರಸಾದ್ ಮಯ್ಯ ಅವರನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ಅಡಿಗ, ಹಾಗೂ ಉಡುಪಿ ಜಿಲ್ಲಾ ನಾಟಿ ವೈದ್ಯ ಸಂಘದ ಅಧ್ಯಕ್ಷ ಹರೀಶ ಸಾಮಗ, ಶಾಂತಿಮತೀ ಪ್ರತಿಷ್ಠಾನದ ಸದಸ್ಯ ಕೆನರಾ ಬ್ಯಾಂಕ್‍ನ ನಿವೃತ್ತ ಮಹಾಪ್ರಬಂಧಕ ಮಂಜುನಾಥ ಭಟ್ ಉಪಸ್ಥಿತರಿದ್ದರು. ವಿದ್ವಾನ್ ಡಾ. ವಿಜಯ ಮಂಜರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಚಂದ್ರಶೇಖರ ಅಡಿಗ ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.