ಬ್ರಹ್ಮಾವರ :ಜೇಸಿಐ ಅಂತರ್ ಘಟಕ ಸಮ್ಮಿಲನ

0
281
????????????????????????????????????

ಕುಂದಾಪುರ ಮಿರರ್ ಸುದ್ದಿ…

ಕೋಟ: ಜೇಸಿಐ ಕಲ್ಯಾಣಪುರ ಹಾಗೂ ಜೇಸಿಐ ಶಂಕರಪುರ ಜಾಸ್ಮಿನ್ ಇವರ ಜಂಟಿ ಆಶ್ರಯದಲ್ಲಿ ಅಂತರ್ ಘಟಕ ಸಮ್ಮಿಲನ ಬ್ರಹ್ಮಾವರದ ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು.

Click Here

ಕಾರ್ಯಕ್ರಮವನ್ನು ಜೇಸಿಐ ಇಂಡಿಯಾ ಫೌಂಡೇಶನ್‍ನ ನಿರ್ದೇಶಕರಾದ ಅಲನ್ ರೋಹನ್ ವಾಜ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಸೀನಿಯರ್ ಛೇಂಬರ್‍ನ ರಾಷ್ಟ್ರೀಯ ನಿರ್ದೇಶಕರಾದ ನವೀನ್ ಅಮೀನ್, ಜೇಸಿಐ ಕಲ್ಯಾಣಪುರದ ಸ್ಥಾಪಕಧ್ಯಕ್ಷ ಜಗದೀಶ್ ಕೆಮ್ಮಣ್ಣು , ಜೇಸಿಐ ಶಂಕರಪುರ ಜಾಸ್ಮಿನ್‍ನ ಅಧ್ಯಕ್ಷ ಜಗದೀಶ್ ಅಮೀನ್, ವಲಯ ಅಧಿಕಾರಿ ರವಿರಾಜ್, ನಿಕಟಪೂರ್ವ ಅಧ್ಯಕ್ಷ ಜೂನಿಯಸ್ ಲೂವಿಸ್, ಕಾರ್ಯಕ್ರಮದ ನಿರ್ದೇಶಕ ಆಶಾ ಅಲನ್, ಪ್ರೀತಿ ಗುಣವರ್ಮ, ಜೂನಿಯರ್ ಜೇಸಿ ಅಧ್ಯಕ್ಷೆ ರೇಚಲ್ ಲೂವಿಸ್, ಉಪಾಧ್ಯಕ್ಷ ನಿತ್ಯಾನಂದ ನೇಜಾರು, ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕಲ್ಯಾಣಪುರದ ಅಧ್ಯಕ್ಷರಾದ ಜಯಶ್ರೀ ಮಿತ್ರಕುಮಾರ್ ವಹಿಸಿ ಸ್ವಾಗತಿಸಿದರು. ಜೂ. ಜೇಸಿ ವಿಜೀಶಾ ಜೇಸಿವಾಣಿ ಉದ್ಘೋಷಿಸಿದರು. ವೇದಾಂತ್ ಜೆ., ಶುಭ ಸಿ. ಅಮೀನ್., ವಿರೇನ್ ಅತಿಥಿಗಳನ್ನು ಪರಿಚಯಿಸಿದರು. ಎರಡು ಘಟಕಗಳ ಅಧ್ಯಕ್ಷರು ತಮ್ಮ ಘಟಕದ ಸಾಧನೆಯನ್ನು ಪರಿಚಯಿಸಿದರು. ದಂಪತಿಗಳಿಗೆ ಫ್ಯಾಶನ್ ಶೋ, ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ಘಟಕದ ಸದಸ್ಯರು ಮನೆಯಲ್ಲೇ ತಯಾರಿಸಿ ತಂದ 32 ಬಗೆಯ ವಿವಿಧ ಖಾದ್ಯಗಳನ್ನು ಉಣಬಡಿಸಲಾಯಿತು. ಕಾರ್ಯದರ್ಶಿಯಾದ ಅನುಸೂಯ ಅನಿಲ್ ವಂದಿಸಿದರು.

Click Here

LEAVE A REPLY

Please enter your comment!
Please enter your name here