ಕುಂದಾಪುರ ಮಿರರ್ ಸುದ್ದಿ…
ಕೋಟ :ಸೇವಾ ಸಂಗಮ ಶಿಶುಮಂದಿರ ಸಾಸ್ತಾನ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಅಂಗವಾಗಿ ಶ್ರೀ ಲಕ್ಷ್ಮೀ ನರಸಿಂಹ ಸಭಾಭವನ ಅಣಲಾಡಿ ಮಠ, ಸಾಸ್ತಾನ ಇಲ್ಲಿ ಶಿಶುಮಂದಿರ ಕೃಷ್ಣ ರಾಧೆಯರಿಂದ ನೃತ್ಯ ವೈಭವ ಹಾಗೂ ಕೃಷ್ಣನ ಬಾಲ ಲೀಲೆಗಳು ಬಾಲ ಗೋಕುಲದ ವಿದ್ಯಾರ್ಥಿಗಳಿಂದ ಹಾಗೂ ಮಾತೆಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.
ಆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಣಲಾಡಿ ಮಠ ಐರೋಡಿ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್ ಕಾರಂತ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸೇವಾಸಂಗಮ ಟ್ರಸ್ಟ್ ಕುಂದಾಪುರ ವಿಶ್ವಸ್ಥ ಕಾರ್ಯದರ್ಶಿ ಚಂದ್ರಿಕಾ ಧನ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಯ್ಯ ಯಕ್ಷ ಶ್ರೀ ಪ್ರತಿಷ್ಠಾನ ಅನಾಲಾಡಿ ಮಠ ಸಂಸ್ಥಾಪಕ ಋಷಿ ಕುಮಾರ್ ಮಯ್ಯ , ಸೇವಾ ಸಂಗಮ ಶಿಶುಮಂದಿರಾ ಸಾಸ್ತಾನ ಅಧ್ಯಕ್ಷರಘು ಪೂಜಾರಿ ಉಪಸ್ಥಿತರಿದ್ದರು.ಇದೇ ವೇಳೆ ಸೇವಾ ಸಂಗಮದ ಪುಟಾಣಿಗಳಿಂದ ಶ್ರೀ ರಾಧಾ ಕೃಷ್ಣರ ವೇಷ ಧರಿಸಿದ ಮಕ್ಕಳ ಶೋಭಾಯಾತ್ರೆ ನಡೆಯಿತು.