ಕಾಂಗ್ರೆಸ್ ನಾಯಕನಿಗೆ ಬ್ಲ್ಯಾಕ್ ಮೇಲ್ – ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟು ಕೊಲೆಬೆದರಿಕೆ

0
762

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಾಂಗ್ರೆಸ್ ಯುವ ನಾಯಕನೊಬ್ಬನಿಗೆ ಮೊಬೈಲ್ ಕರೆ ಮಾಡಿ ಹತ್ತು ಲಕ್ಷ ರೂಪಾಯಿ ನೀಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮದ ಬನ್ನಾಡಿ ಎಂಬಲ್ಲಿ ನಡೆದಿದೆ. ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಬನ್ನಾಡಿಯ ಅಜಿತ್ ಕುಮಾರ್ ಶೆಟ್ಟಿ ಎಂಬುವರೇ ಬೆದರಿಕೆಗೊಳಗಾಗಿ ಪೊಲೀಸ್ ದೂರು ನೀಡಿದವರು. ಭರತ್ ದಾಸ್ ಹಾಗೂ ಇನ್ನೋರ್ವ ವ್ಯಕ್ತಿ ಆರೋಪಿಗಳು.

Click Here

ಆಗಸ್ಟ್ 31ರಂದು ಸಂಜೆ 5 ಗಂಟೆಗೆ ಅಜಿತ್ ಕುಮಾರ್ ಶೆಟ್ಟಿಯವರ 9945562016 ನಂಬರ್ ಗೆ 97470496814 ನಿಂದ ವಾಟ್ಸಾಪ್ ಕರೆ ಬಂದಿದ್ದು, ಅನಾಮಿಕ ಕರೆಯಾದ್ದರಿಂದ ಸ್ವೀಕರಿಸಿರಲಿಲ್ಲ. ಪದೇ ಪದೇ ಕರೆ ಬರಲಾರಂಭಿಸಿದ ನಂತರ ಕರೆ ಸ್ವೀಕರಿಸಿದ್ದು ಆಚೆಯಿಂದ ಕರೆ ಮಾಡಿದಾತ ತನ್ನನ್ನು ಭರತ್ ದಾಸ ಕರೆ ಮಾಡಲು ಸೂಚಿಸಿದ್ದು ,ನೀನು ನನಗೆ 10.00.000 ಹಣವನ್ನು ಕೂಡಲೇ ನೀಡಿ ಬಿಡು ಇಲ್ಲವಾದಲ್ಲಿ ನಿನ್ನನ್ನು ಕೊಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾನೆನ್ನಲಾಗಿದೆ. ಸ್ವಲ್ಪ ಸಮಯದ ನಂತರ ಕರೆ ಮಾಡಿದ ವ್ಯಕ್ತಿಯು ವಾಟ್ಸಾಪ್ ನಲ್ಲಿ ಧ್ವನಿ ಮುದ್ರಿತ ಮೇಸೇಜ ನ್ನು ಕಳುಹಿಸಿದ್ದು, ಅಜಿತ್ ಶೆಟ್ಟಿಯನ್ನು ಅವಾಚ್ಯ ವಾಗಿ ನಿಂದಿಸಿ ಬೆಳಿಗ್ಗೆ ಆಗುವುದರೊಳಗೆ ತೆಗೆದು ಬಿಡುತ್ತೇನೆ ಎಂದು ಬೆದರಿಸಿಲಾಗಿದೆ ಎನ್ನಲಾಗಿದೆ. ಇನ್ನೊಂದು ಮೆಸೇಜ್ ಬಂದಿದ್ದು, ಅದರಲ್ಲಿ ಬೆಳಿಗ್ಗೆ ಆಗುವುದರೊಳಗೆ ತೆಗೆದುಬಿಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಲಾಗಿದೆ ಎಂದು ಕಾಲ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here