ವಿಶ್ವದ ಎರಡನೇ ಅತಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯ ರಸ್ತೆಯಲ್ಲಿ 6 ದಿನಗಳಲ್ಲಿ 900 ಕಿಲೋಮೀಟರ್ ಸವಾರಿ ಮಾಡಿ ದಾಖಲೆ ಬರೆದ ಕುಂದಾಪುರದ ವಿಲ್ಮಾ ಫೆಡ್ರೆಟಿಯಾ ಕರ್ವಾಲೋ

0
401

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ಮೂಲದ 54ರ ಹರೆಯದ ವಿಲ್ಮಾ ಫೆಡ್ರೆಟಿಯಾ ಕರ್ವಾಲೋ ಅವರು ವಿಶ್ವದ ಎರಡನೇ ಅತಿ ಎತ್ತರದ ಮೋಟಾರು ವಾಹನ ರಸ್ತೆಯಾದ ಖಾರ್ದುಂಗ್ ಲಾ ಪಾಸ್ನಲ್ಲಿ ಮೋಟರ್ಬೈಕ್ ಪ್ರಯಾಣದ ಕನಸನ್ನು ನನಸಾಗಿಸಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಭಾರತದ ಹಿರಿಯ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಲ್ಮಾ ಫೆಡ್ರೆಟಿಯಾ ಕರ್ವಾಲೋ ತನ್ನ ಮೋಟಾರ್ಸೈಕಲ್ನಲ್ಲಿ ‘ಲೇಹ್ನಿಂದ ಲೇಹ್ಗೆ’ ಹಿಮಾಲಯದ ಯಾತ್ರೆಯಲ್ಲಿ ಖುರ್ದುಂಗ್ ಲಾ, ನುಬ್ರಾ, ಹಂಡರ್, ಪ್ಯಾಂಗೊಂಗ್ ಲೇಕ್, ತ್ಸೊ ಮೊರಿರಿ ಮೂಲಕ ಹಾದು ಲೇಹ್ ತಲುಪಿದರು.

Click Here

Click Here

ವಿಶ್ವದ ಎರಡನೇ ಅತಿ ಎತ್ತರದ ಮೋಟಾರು ರಸ್ತೆಯಲ್ಲಿ 6 ದಿನಗಳಲ್ಲಿ 900 ಕಿಲೋಮೀಟರ್ ಸವಾರಿ ಮಾಡಿದ್ದಾರೆ. ಈ ಸಂದರ್ಭ 500 ಕಿಲೋಮೀಟರ್ಗಳು ಕಡಿಮೆ ಆಮ್ಲಜನಕದ ಮಟ್ಟ, ರಸ್ತೆ ಪರಿಸ್ಥಿತಿಗಳು ಮತ್ತು ಭೂಪ್ರದೇಶಗಳು ಸವಾಲೊಡ್ಡಿದ್ದವು.

ಈ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ನಾನು ಕಳೆದ ಆರು ತಿಂಗಳುಗಳಿಂದ ತರಬೇತಿ ಪಡೆದಿದ್ದೇನೆ. ನನ್ನ ಮಗ ಮತ್ತು ಮಗಳು ನನ್ನ ದೊಡ್ಡ ಪ್ರೇರಕರಾಗಿದ್ದಾರೆ,ಎಂದು ವಿಲ್ಮಾ ಹೇಳಿದ್ದಾರೆ. ಈ ಯಾತ್ರೆಯು ಅವರ ಕನಸುಗಳಲ್ಲಿ ಒಂದಾಗಿದ್ದು, ಅದನ್ನು ನನಸಾಗಿಸಿಕೊಂಡಿದ್ದೇನೆ ಎಂದಿದ್ದಾರೆ.

ಕುಂದಾಪುರದ ದಿ! ಎಡ್ವಿನ್ ಕ್ರಾಸ್ಟೊ ಹಾಗೂ ಕುಂದಾಪುರ ಪುರಸಭೆಯ ಮಾಜಿ ಉಪಾದ್ಯಕ್ಷೆ ಲಿಯೋನೆಲ್ಲಾ ಕ್ರಾಸ್ಟೊ ರವರ ಪುತ್ರಿ ಮತ್ತು ಕುಂದಾಪುರ ಮೂಲದವರೇ ಆದ ಲೆಸ್ಲಿ ಕರ್ವಾಲೋ ರವರ ಧರ್ಮಪತ್ನಿ . ವಿಲ್ಮಾರವರು ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ. ರಾಷ್ಟ್ರಮಟ್ಟದಲ್ಲಿ ಕರ್ನಾಟಕದಿಂದ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ ಮೊದಲ ಹುಡುಗಿ ವಿಲ್ಮಾ ಪ್ರಸ್ತುತ, ಅವರು ಕಾರ್ಪೊರೇಟ್ ತರಬೇತುದಾರರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.

Click Here

LEAVE A REPLY

Please enter your comment!
Please enter your name here