ಕುಂದಾಪುರ ಮಿರರ್ ಸುದ್ದಿ…
ಕೋಟ: ಗ್ರಾಮ ಪಂಚಾಯತ್ ಕೋಡಿ, ಆರೋಗ್ಯ ಇಲಾಖೆ ಕೊಡಿಬೆಂಗ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬ್ರಹ್ಮಾವರ ಇವರುಗಳ ಸಹಯೋಗದಿಂದ ಹೊಸಬೆಂಗ್ರೆ ಅಂಗನವಾಡಿಯಲ್ಲಿ ಪಂಚಾಯತ್‍ರಾಜ್ ಪೋಷಣ್ ಅಭಿಯಾನದಡಿ ವಾಟಿಕಾದಲ್ಲಿ ಮನೆ ಮದ್ದು ವೈದ್ಯಕೀಯ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಕೋಡಿ ಗ್ರಾ.ಪಂ ಅಧ್ಯಕ್ಷ ಪ್ರಭಾಕರ ಮೆಂಡನ್, ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಹಾಗೂ ಗ್ರಾ.ಪಂ.ಸದಸ್ಯರಾದ ಕೃಷ್ಣ ಪೂಜಾರಿ ಮತ್ತು ಗೀತಾ ಖಾರ್ವಿ ಹಾಗೂ ಆರೋಗ್ಯ ಇಲಾಖೆಯಿಂದ ಮಧು.ಎ.ಎನ್, ಆಶಾಕಾರ್ಯಕರ್ತೆ ಜ್ಯೋತಿ ಬಾಲ ವಿಕಾಸ ಸಮಿತಿ ಸದಸ್ಯ ರಾಮಚಂದ್ರ ಖಾರ್ವಿ , ನಿರ್ಮಲ, ವೈಶಾಲಿ ,ಸ್ಫೂರ್ತಿ ಹಾಗೂ ಎಲ್ಲಾ ಪೋಷಕರು ಉಪಸ್ಥಿತರಿದ್ದರು.
ಯಮುನಾ ವಂದನಾರ್ಪಣೆ ಮಾಡಿದರು.