ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ರೇಖಾ ಕೆ ಯು.ಗೆ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ವತಿಯಿಂದ ಸನ್ಮಾನ

0
694

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವಿಕೆ ಆಚಾರ್ಯ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ಶಿಕ್ಷಕಿ ಶ್ರೀಮತಿ ರೇಖಾ ಕೆಯು ಅವರನ್ನು ಶಿಕ್ಷಕ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರದ ವತಿಯಿಂದ ಗೌರವಿಸಲಾಯಿತು.

Click Here

Click Here

ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ದೇಶದ ನಾನಾ ಕಡೆಗಳಲ್ಲಿ ಭಾಗವಹಿಸಿ ಸಾಧನೆಗೈಯಲು ಕಾರಣರಾದ ಶಿಕ್ಷಕಿ ರೇಖಾ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ವಹಿಸಿದ್ದರು.

ಕಾರ್ಯದರ್ಶಿ ಜಯಶೀಲಕಾಮತ್ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಅಮೃತಧಾರಾ ದ ಮುಂದಿನ ಸಾಲಿನ ಚುನಾಯಿತ ಅಧ್ಯಕ್ಷೆ ಆಶಾ ಶಿವರಾಮಶೆಟ್ಟಿ ನಿರ್ದೇಶಕಿ ಕಲ್ಪನಾ ಭಾಸ್ಕರ್, ಸಮಾಜಸೇವಕ ಗಣೇಶ್ ಪುತ್ರನ್, ರೇಖಾ ಅವರ ಕುಟುಂಬದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here