ಕುಂದಾಪುರದಲ್ಲಿ ಚತುಷ್ಪಥದ ನಡುವೆ ಪಾದಚಾರಿಗಳ ಯೋಚನೆಯನ್ನೇ ಮರೆತು ಬಿಟ್ಟಂತೆ ಇದೆ. ಕಿರಿದಾದ ಸರ್ವೀಸ್ ರಸ್ತೆಯಲ್ಲಿಯೇ ಎಲ್ಲ ವಾಹನಗಳು ಅವಲಂಬಿಸಿವೆ. ಈ ನಡುವೆ ಪಾದಚಾರಿಗಳಿಗೆ ತಿರುಗಾಡಲು ಸೂಕ್ತ ಮಾರ್ಗವೇ ವ್ಯವಸ್ಥಿತವಾಗಿಲ್ಲ. ಚರಂಡಿಗೆ ಅಳವಡಿಸಿದ ಸ್ಲ್ಯಾಬ್ ಮೇಲಾದರೂ ನಡೆಯೋಣ ಎಂದರೂ ಮಳೆಗಾಲದಲ್ಲಿ ಬೆಳೆದ ಪೊದೆ ಗಿಡಗಳನ್ನು ಇನ್ನೂ ಕೂಡಾ ತೆರವು ಗೊಳಿಸುವ ಕೆಲಸವಾಗಿಲ್ಲ. ಚರಂಡಿ ಸ್ಲ್ಯಾಬ್‍ಗಳನ್ನೇ ಗಿಡಗಂಟಿಗಳು ಅತಿಕ್ರಮಿಸಿಕೊಂಡಿದ್ದರೆ ಕೆಲವೆಡೆ ಸ್ಲ್ಯಾಬ್ ತೆರೆದಿವೆ. ಇನ್ನೂ ಕೆಲವಡೆ ಗೂಡಾಂಗಡಿಗಳು ಪುಟ್‍ಪಾತ್‍ನ್ನೆ ಆಕ್ರಮಿಸಿಕೊಂಡಿದೆ. ಹಾಗಾಗಿ ಪಾದಚಾರಿಗಳು ಅನಿವಾರ್ಯವಾಗಿ ವಾಹನಬಿಡಾದ ಸರ್ವೀಸ್ ರಸ್ತೆಗೆ ಇಳಿಯಬೇಕಾದ ಅನಿರ್ವಾತೆ ಸೃಷ್ಟಿಯಾಗಿದೆ.
ಈಗ ಕುಂದಾಪುರ ಕಾಲೇಜು ರಸ್ತೆ ತಿರುವಿನಿಂದ ವಿನಾಯಕದ ತನಕವೂ ಪುಟ್‍ಪಾತ್ ಇದೆ. ಒಂದಿಷ್ಟು ಅಗಲದ ಸರ್ಕಾರಿ ಸ್ವಾಮ್ಯದ ಸ್ಥಳವೂ ಇದೆ. ಆದರೆ ಅಲ್ಲಲ್ಲಿ ತಲೆಎತ್ತಿರುವ ಗೂಡಾಂಗಡಿಗಳು ಕಾಲುದಾರಿಯನ್ನೇ ಅತಿಕ್ರಮಿಸಿಕೊಂಡಿವೆ. ಚರಂಡಿಯ ಮೇಲೆ ಹಾಕಲಾದ ಸ್ಲ್ಯಾಬ್‍ನ ಮೇಲೆಯೇ ಪಾದಾಚಾರಿಗಳು ನಡೆಯಬೇಕು. ಅದಾದರೂ ಸರಿ, ಆದರೆ ವಿನಾಯಕದ ತನಕ ಚರಂಡಿಗೆ ನಿರಂತರವಾಗಿ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ಅಲ್ಲಲ್ಲಿ ಏಕಾಏಕಿ ಮುಚ್ಚಿಗೆ ಹಾಕದೇ ಬಿಟ್ಟಿರುವುದು ಅಪಾಯಕಾರಿಯಾಗಿದೆ. ಗಾಂಧಿ ಮೈದಾನದ ಪಾಶ್ರ್ಚದಲ್ಲಿಯೇ ಮೋರಿ ಇರುವೆಡೆ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ಇದು ಅತ್ಯಂತ ಅಪಾಯಕಾರಿಯಾಗಿದೆ.
ಪಾದಚಾರಿಗಳಿಗೆ ನಡೆದಾಡಲು ಸಮರ್ಪಕ ಕಾಲುದಾರಿಯನ್ನು ನಿರ್ಮಾಣ ಮಾಡಲು ಸರ್ಕಲ್‍ನಿಂದ ವಿನಾಯಕದ ತನಕ ಅವಕಾಶವಿದೆ. ಈಗ ಚರಂಡಿಗೆ ಹಾಕಲಾದ ಸ್ಲ್ಯಾಬ್‍ನ್ನೇ ಬಳಸಿಕೊಂಡು ಬಲ ಬದಿಗೆ ಒಂದಿಷ್ಟು ಅಗಲ ಮಾಡಿದರೆ ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಬದ್ದತೆ ಪ್ರದರ್ಶಿಸಿಸಬೇಕಿದೆ.
ಕುಂದಾಪುರ ನಗರದಲ್ಲಿ ಪಾದಚಾರಿಗಳಿಗೆ ನಡೆದಾಡಲು ಸ್ಥಳವಕಾಶ ಇಲ್ಲ ಎನ್ನುವ ಸಾರ್ವಜನಿಕ ದೂರುಗಳು ನಿರಂತರವಾಗಿ ಕೇಳಿ ಬರುತ್ತಿದೆ. ಶಾಲಾ ಮಕ್ಕಳಿಗೂ ನಡೆದಾಡಲು ಕಷ್ಟವಾಗುತ್ತದೆ. ಅಲ್ಲದೇ ಹಲವಾರು ಸರ್ಕಾರಿ ಕಛೇರಿಗಳು ಈ ಭಾಗದಲ್ಲಿಯೇ ಇದೆ. ಹಳ್ಳಿ ಹಳ್ಳಿಗಳಿಂದ ಬಸ್‍ಗಳಲ್ಲಿ ಬರುವ ಜನಸಾಮಾನ್ಯರು ನಡೆದುಕೊಂಡೇ ಕಚೇರಿಗಳಿಗೆ ಹೋಗಬೇಕು. ಆದರೆ ಇಲ್ಲಿ ನಡೆದುಕೊಂಡು ಹೋಗಲು ಸರಿಯಾದ ಮಾರ್ಗವೇ ಇಲ್ಲದಿರುವುದು ವಿಷಾಧನೀಯ.
ಮೇಲ್ಸೆತುವೆ ಮುಕ್ತಾಯ ಮತ್ತೆ ಮಾರ್ಚ್ ಅಂತ್ಯ!
ಕುಂದಾಪುರದಲ್ಲಿ ಮೇಲ್ಸೆತುವೆ ಕಾಮಗಾರಿ ಕಳೆದ ಮಾರ್ಚ್ ಅಂತ್ಯದೊಳಗೆ ಮುಕ್ತಾಯ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಯಾರ ದುರಾದೃಷ್ಟವೋ ಕೊರೋನಾದ ನೆವದಿಂದ ವಿರಾಮ ಸಿಕ್ಕಿತ್ತು. ಈಗ ಎಲ್ಲಾ ಸರಿಯಾಗಿದ್ದರೂ ಕೂಡಾ ಕಂಪೆನಿ ಕಾಮಗಾರಿಯನ್ನು ವೇಗಗೊಳಿಸುತ್ತಿಲ್ಲ. 2021ರ ಮಾರ್ಚ್ ಅಂತ್ಯಕ್ಕೆ ಮುಗಿಸಲಾಗುತ್ತದೆ ಎಂದು ಜಿ.ಪಂ,.ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಎಷ್ಟು ಮಾರ್ಚ್ ಬರಬೇಕು ಎನ್ನುವುದು ಗೊತ್ತಿಲ್ಲ.
ಚರಂಡಿ ಸ್ಲ್ಯಾಬ್ ಮೇಲಾದರೂ ಪಾದಾಚಾರಿಗಳಿಗೆ ಅನುಕೂಲ ಕಲ್ಪಿಸಿ
ಇಕ್ಕಟ್ಟಾದ ಸರ್ವೀಸ್ ರಸ್ತೆಯಿಂದಾಗಿ ವಾಹನಗಳು ನಿಬಿಡತೆಯಲ್ಲಿ ಸದಾ ಕರ್ಕಶ ಹಾರ್ನ್‍ಗಳ ಕಿವಿಗಡಚ್ಚುವ ಶಬ್ದಗಳು. ಇದು ಕಳೆದ ಎರಡು ವರ್ಷದಿಂದ ಕುಂದಾಪುರ ಜನ ಅನುಭವಿಸಿಕೊಂಡು ಬಂದಿರುವ ಗೋಳು. ಇದರ ನಡುವೆ ಪಾಪ ಪಾದಚಾರಿಗಳ ಗೋಳು ಕೇಳುವವರೇ ಇಲ್ಲ. ರಸ್ತೆಯ ಪಕ್ಕದ ಚರಂಡಿ ಸ್ಲ್ಯಾಬ್ ಮೇಲಾದರೂ ಹೋಗೋಣವೆಂದರೂ ಅಲ್ಲಲ್ಲಿ ಸ್ಲ್ಯಾಬ್ ಬಾಯಿ ಬಿಟ್ಟಿದೆ. ಕೆಲವಡೆ ಗೂಡಾಂಗಡಿಗಳು ಚರಂಡಿ ಸ್ಲ್ಯಾಬ್‍ಗಳನ್ನೇ ಅತಿಕ್ರಮಿಸಿಕೊಂಡಿವೆ.