ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಬೆಂಗಳೂರಿನಲ್ಲಿ ನಡೆದ ಸ್ಕೂಟಿ ಹಾಗೂ ಟ್ಯಾಂಕರ್ ನಡುವಿನ ಅಪಘಾತದಲ್ಲಿ ಕುಂದಾಪುರದ ಬೈಂದೂರು ಸಮೀಪದ ಹೊಸ್ಕೋಟೆ ಬಳಿಯ ನಿವಾಸಿ ಸಾವನ್ನಪ್ಪಿದ ಘಟನೆ ಸೆ .12ರ ಭಾನುವಾರ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಹೊಸ್ಕೋಟೆ ಸಮೀಪದ ಬೊಳ್ಳುಗುಡ್ಡೆ ನಿವಾಸಿ ಪ್ರೇಮ ಪೂಜಾರಿ(35) ಎಂದು ಗುರುತಿಸಲಾಗಿದೆ.
ಪ್ರೇಮ ಪೂಜಾರಿ ಎರಡು ವರ್ಷದ ಹಿಂದೆ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗಿದ್ದರು. ಬೆಂಗಳೂರಿನಲ್ಲಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಮಧ್ಯಾಹ್ನ ಪತಿ ಜೊತೆ ಹೊರಗೆ ಹೋಗಿದ್ದರೆನ್ನಲಾಗಿದೆ. ಯಲಹಂಕ ಸಮೀಪ ಅಪಘಾತ ಸಂಭವಿಸಿದ್ದು ಪ್ರೇಮ ಪೂಜಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಮೃತದೇಹವನ್ನು ಬೊಳ್ಳುಗುಡ್ಡೆಯ ಸ್ವಗೃಹಕ್ಕೆ ತರಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು. ಪ್ರೇಮ ಪೂಜಾರಿಯವರು ಪತಿ, ಇಬ್ಬರು ಮಕ್ಕಳು ಹಾಗೂ ಕುಟುಂಬವನ್ನು ಅಗಲಿದ್ದಾರೆ.