ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗುಲ್ವಾಡಿ ಇಲ್ಲಿನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುಲ್ವಾಡಿ ಟಾಕೀಸ್ ಎಂಬ ಸಿನಿಮಾ, ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ ನೀಡುವ 2022 ನೇ ಸಾಲಿನ ಪ್ರಥಮ ವರ್ಷದ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ (ಇಂದಿರಾಬಾಯಿ) ಕರ್ತ ಗುಲ್ವಾಡಿ ವೆಂಕಟರಾವ್ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಗುಲ್ವಾಡಿ ವೆಂಕಟರಾವ್ ಜೀವಮಾನ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ 2022 ನ್ನು ನಿವೃತ್ತ ಪೊಲೀಸ್ ಅಧಿಕಾರಿ, ಕವಿ ಡಾ.ಡಿ.ಸಿ.ರಾಜಪ್ಪ ಅವರಿಗೆ ದಿನಾಂಕ 14.9.2022 ಬುಧವಾರ ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಅಧ್ಯಕ್ಷರಾದ ಡಾ. ಮಹೇಶ ಜೋಷಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು ಐದು ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ತಿಳಿಸಿದ್ದಾರೆ.
ಡಾ.ಡಿ.ಸಿ.ರಾಜಪ್ಪ ಡಿ.ಐ.ಜಿ.ಪಿ (ನಿವೃತ್ತ) ಅವರು ಪೋಲೀಸ್ ಇಲಾಖೆಯಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಿ ಜನ ಸ್ನೇಹಿ ಪೋಲೀಸ್ ವ್ಯವಸ್ಥೆ ಜಾರಿಗೆ ತಂದಿದ್ದರು. ಪ್ರವೃತ್ತಿಯಿಂದ ಕವಿ,ಲೇಖಕ, ಸಂಶೋಧಕ ಪೊಲೀಸ್ ಇಲಾಖೆಯಲ್ಲಿರುವ ಪ್ರತಿಭಾವಂತರಿಗಾಗಿಯೇ ಪೊಲೀಸ್ ಸಾಹಿತ್ಯ ವೇದಿಕೆಯ ಮೂಲಕ ಅನೇಕ ಸಮ್ಮೇಳನ ಸಂಘಟಿಸಿದ್ದರು. ಜಂಟಿ ಪೊಲೀಸ್ ಆಯುಕ್ತರಾಗಿ, ಸಿಐಡಿ ಪೊಲೀಸ್ ಅಧೀಕ್ಷಕರಾಗಿ ಸಾಹಿತಿ ಡಾ.ಎಂ.ಎಂ.ಕಲ್ಬುರ್ಗಿಯವರ ಕೊಲೆ ಪ್ರಕರಣದ ಉಸ್ತುವಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.