ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ ವಿಶ್ವಜ್ಯೋತಿ ಮಹಿಳಾ ಬಳಗ ಸಾಲಿಗ್ರಾಮ ಇವರ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನದಲ್ಲಿ ಶನಿವಾರ ಸಂಭ್ರಮದ ವಿಶ್ವಕರ್ಮ ಯಜ್ಞ ಮಹೋತ್ಸವ ಅಂಗವಾಗಿ ಸಾಧಕರಿಗೆ ಸನ್ಮಾನ ,ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕ್ ಆಫ್ ಬರೋಡ ಮಂದಾರ್ತಿ ಶಾಖೆಯ ಸಹಾಯಕ ಪ್ರಬಂಧಕ ಹರ್ಷ ಆಚಾರ್ಯ ಚೇಂಪಿ ಶುಭಾಶಂಸನೆಗೈದರು.
ಈ ವೇಳೆ ಸಮುದಾಯದ ಹಿರಿಯ ಸಾಧಕರಾದ ಕಾರ್ಕಡ ನಾಗಪ್ಪ ಆಚಾರ್ಯ ದಂಪತಿ, ಸಂಗೀತ ಕ್ಷೇತ್ರದ ಅಶೋಕ್ ಆಚಾರ್ಯ ಹಾಗೂ ಡ್ರಾಮಾ ಜೂನಿಯರ್ಸ್ ರನ್ನರ್ ಅಪ್ ವಿನ್ನರ್ ಕುಮಾರಿ ಸಾನಿಧ್ಯ ಆಚಾರ್ಯ ಪರ್ದೂ ಇವರುಳನ್ನು ಸನ್ಮಾನಿಸಲಾಯಿತು.
ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಜೀವನ ಆಚಾರ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನವನೀತ್ ಆಚಾರ್ ಇವರನ್ನು ಅಭಿನಂದಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಶೇಕಡ 75ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು, ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ವಿರಾಡಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ್ ಆಚಾರ್ಯ ಚೆಂಪಿ, ಡ್ಯವೆಲ್ ಸ್ಟಾರ್ ಸ್ಕೂಲ್ ಅಮಾವಾಸ್ಯೆಬೈಲು ಇದರ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ,ವಿಶ್ವಕರ್ಮ ಕಲಾವೃಂದದ ಅಧ್ಯಕ್ಷ ವೆಂಕಟೇಶ್ ಆಚಾರ್ಯ, ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ಸುಜಾತ ರಾಘವೇಂದ್ರ ಆಚಾರ್ಯ ,ವಿರಾಡಿಶ್ವ ಸಮಾಜೋದ್ಧಾರಕ ಸಂಘದ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ಸಾಹೇಬ್ರಕಟ್ಟೆ ಕಾರ್ಯದರ್ಶಿ ಕೇಶವಚಾರ್ಯ ಐರೋಡಿ ಕೋಶಾಧಿಕಾರಿ ರಮೇಶ್ ಆಚಾರ್ಯ ಚೆಂಪೀ, ವಿಶ್ವಜ್ಯೋತಿ ಮಹಿಳಾ ಬಳಗದ ಕಾರ್ಯದರ್ಶಿ ವಾಣಿ ಸುರೇಶ್ ಆಚಾರ್ಯ, ಉಪಸ್ಥಿತರಿದ್ದರು. ಅಜಿತ್ ಆಚಾರ್ಯ ಕೋಟ ಸ್ವಾಗತಿಸಿ, ದಿನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಕೇಶವ್ ಆಚಾರ್ಯ ವಂದಸಿದರು
ಸಭಾ ಕಾರ್ಯಕ್ರಮದ ನಂತರ ಬಾಲ ಪ್ರತಿಭೆಗಳಿಂದ, ಮಹಿಳಾ ಬಳಗದ ಸದಸ್ಯರಿಂದ ನೃತ್ಯ ,ಸಂಗೀತ ಕಾರ್ಯಕ್ರಮ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ರಾಘವೇಂದ್ರ ಮಯ್ಯ ಹಾಲಾಡಿ ಮತ್ತು ಬಳಗದವರಿಂದ ಗಾನ ವೈಭವ ಕಾರ್ಯಕ್ರಮ ಜರುಗಿತು.