ಕುಂದಾಪುರ ಮಿರರ್ ಸುದ್ದಿ…
ಬೈಂದೂರು : ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತೊಂಡೆಮಕ್ಕಿ ಪ್ರದೇಶದಲ್ಲಿ ಐವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ದೊರಕಿಲ್ಲ. ಜನಪ್ರತಿನಿಧಿಗಳ ಬಳಿ, ಅಧಿಕಾರಿಗಳ ಬಳಿ ಅಲೆದೂ ಅಲೆದು ಸುಸ್ತಾದ ಇಲ್ಲಿಯ ಜನ ದಿಕ್ಕು ಕಾಣದಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತ ನಿತಿನ್ ನಾರಾಯಣ್ ತೊಂಡೆಮಕ್ಕಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಗ್ರಾಮಸ್ಥರ ಅಳಲನ್ನು ಕೇಳಿದರು. ಬಳಿಕ ಬೈಂದೂರು ತಹಸೀಲ್ದಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಿತಿನ್ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿ ಸಂತ್ರಸ್ಥರಿಗೆ ಆದ್ಯತೆಯ ಮೇಲೆ ಹಕ್ಕುಪತ್ರ ವಿತರಿಸುವ ಭರವಸೆ ನೀಡಿದ್ದಾರೆ ಎಂದು ನಿತಿನ್ ನಾರಾಯಣ್ ಹೇಳಿದ್ದಾರೆ.
ಇದೀಗ ನಿತಿನ್ ನಾರಾಯಣ್ ಸಾಮಾಜಿಕ ಕಳಕಳಿ ಗ್ರಾಮಸ್ಥರ ಪ್ರಶಂಸೆಗೆ ಕಾರಣವಾಗಿದೆ.
ಈ ಸಂದರ್ಭ ಮಧುಕರ ವಂಡ್ಸೆ, ರಾಘವೇಂದ್ರ, ನಾಗೇಂದ್ರ ಆಚಾರ್ಯ, ವಿಠಲ ತೊಂಡೆಮಕ್ಕಿ, ರಾಮ ತೊಂಡೆಮಕ್ಕಿ, ಮೂಡಣಗದ್ದೆ ರಾಜೇಶ್ ಗಾಣಿಗ ಮೊದಲಾದವರಿದ್ದರು.