ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಜಿಲ್ಲಾಡಳಿತ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಉಡುಪಿ ಇವರ ನೇತ್ರತ್ವದಲ್ಲಿ ಐರೋಡಿ ಗ್ರಾಮಪಂಚಾಯತ್ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಅಭಿಯಾನ,ಪೌಷ್ಠಿಕ ಆಹಾರ ಪ್ರದರ್ಶನ ಮಾಹಿತಿ ಕಾರ್ಯಕ್ರಮ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಐರೋಡಿ ಗ್ರಾ.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೆಣೈ ಉದ್ಘಾಟಿಸಿದರು. ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಐರೋಡಿ ಗ್ರಾಮಪಂಚಾಯತಿಯ ಉಪಾಧ್ಯಕ್ಷ ನಟರಾಜ್ ಗಾಣಿಗ, ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ರಾಘವೇಂದ್ರ ರಾವ್, ಸಿ.ಹೆಚ್ ಓ ಶೈಲ, ಶಾಲಾ ಮುಖ್ಯ ಶಿಕ್ಷಕಿ ಸೇಸು ಟೀಚರ್, ಸಾಸ್ತಾನ ಅರೋಗ್ಯ ಕೇಂದ್ರದ ಸಹಾಯಕಿ ಜಯಂತಿ, ಆಶಾ ಹಾಗೂ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ,ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಲಕ್ಷ್ಮೀ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಕಾರ್ಯಕ್ರಮದಲ್ಲಿ ವಿವಿಧ ತರಹದ ಹಣ್ಣು ತರಕಾರಿ ,ಬೆಳೆಕಾಳುಗಳು,ಆಹಾರ ಪದಾರ್ಥಗಳು ಗಮನ ಸೆಳೆದವು.