ಪಂಚವರ್ಣದ 135ನೇ ವಾರದ ಅಭಿಯಾನ ಶರನ್ನವರಾತ್ರಿ ಅಂಗವಾಗಿ ಪಾಂಡೇಶ್ವರ ದೇವಳ ಸ್ವಚ್ಛತಾಕಾರ್ಯ

0
358

ಕುಂದಾಪುರ ಮಿರರ್ ಸುದ್ದಿ…

ಕೋಟ: ಗ್ರಾಮ ಗ್ರಾಮಗಳಲ್ಲಿ ಸ್ವಚ್ಛತೆಯ ಝೇಂಕಾರ ಮೊಳಗಲಿ ಎಂದು ಪಾಂಡೇಶ್ವರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಹೇಳಿದ್ದಾರೆ.

Click Here

ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಯಕ್ಷಸೌರಭ ಕಲಾರಂಗ ಕೋಟ,ರಕ್ತೇಶ್ವರಿ ಬಳಗ ಪಾಂಡೇಶ್ವರ ಇವರ ಸಹಯೋಗದೊಂದಿಗೆ ಪ್ರತಿ ಭಾನುವಾರದ ಸ್ವಚ್ಛತಾ ಅಭಿಯಾನಕ್ಕೆ 135ನೇ ವಾರದ ಸಂಭ್ರಮ ಆ ಪ್ರಯುಕ್ತ ಶರನ್ನವರಾತ್ರಿ ಅಂಗವಾಗಿ ಪಾಂಡೇಶ್ವರ ರಕ್ತೇಶ್ವರಿ ದೇವಳವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಚ್ಛಗೊಳಿಸುವ ಕಾರ್ಯಕ್ರಮ ಬರೇ ಸಂಘಟನೆಗಳಿಗೆ ಸಿಮೀತಗೊಳ್ಳಬಾರದು ಅದು ವ್ಯಾಪಕವಾಗಿ ಜನಮನದಲ್ಲಿ ಜಾಗೃತಿಮೂಡಿ ಪರಿಸರವನ್ನು ಆರಾಧಿಸುವರೆಗೆ ಮುಟ್ಟಬೇಕು ಆಗ ಮಾತ್ರ ನಾವುಗಳು ಪರಿಶುದ್ಧ ವಾತಾವರಣವಾಗಿಸಲು ಸಾಧ್ಯ ,ಭಕ್ತಿ ಆರಾಧನೆಯಿಂದ ದೇವರನ್ನು ಹೇಗೆ ಪೂಜಿಸುತ್ತೇವೊ
ದೇವಳಗಳ ಶುಚಿತ್ವದ ಮೂಲಕ ದೇವರನ್ನು ಹತ್ತಿರವಾಗಿ ಕಾಣಲು ಸಾಧ್ಯ ಎಂದು ಪಂಚವರ್ಣ ಹಾಗೂ ಇತರ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.

ಈ ವೇಳೆ ಕದ್ರಿ ಮಂಜುನಾಥೇಶ್ವರ ದೇವಳದ ಟ್ರಸ್ಟಿ ಕುಸುಮ ದೇವಾಡಿಗ, ರಕ್ತೇಶ್ವರಿ ಬಳಗದ ಅಧ್ಯಕ್ಷ ನಾರಾಯಣ ವಿ.ಆಚಾರ್ಯ, ಬಳಗದ ಪ್ರಮುಖರಾದ ವೆಂಕಟೇಶ ಪೂಜಾರಿ,ಕೃಷ್ಣ ಮರಕಾಲ, ವಿಪ್ರಮಹಿಳಾ ಬಳಗದ ಸಂಚಾಲಕಿ ವನೀತಾ ಉಪಾಧ್ಯ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ ,ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣದ ಮಹಿಳಾಧ್ಯಕ್ಷೆ ಕಲಾವತಿ ಅಶೋಕ್,ಧರ್ಮಸ್ಥಳ ಗ್ರಾ.ಯೋ.ಪಾಂಡೇಶ್ವರ ವಲಯದ ಶೋಭಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here