ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಧ್ಯಾವಧಿ ಪರೀಕ್ಷೆ ಮುಗಿಯುತ್ತಿದ್ದಂತೆ ತರಗತಿ ವಿಷಯಾಧಾರಿತ ರಸಪ್ರಶ್ನೆ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು. ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಶಿಕ್ಷಕ ದಿನೇಶ್ ಪ್ರಭುರವರು ಕಾರ್ಯಕ್ರಮ ನಡೆಸಿಕೊಟ್ಟರು. ಆರೂ ವಿಷಯಗಳ ಪಠ್ಯ ಪುಸ್ತಕ ಆಧರಿತ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇದರೊಂದಿಗೆ ಸಾಮಾನ್ಯ ಜ್ಞಾನ, ಕ್ರೀಡೆ, ಪ್ರಚಲಿತ ವಿಚಾರಗಳೊಂದಿಗೆ ರಸಪ್ರಶ್ನೆಯನ್ನು ಆಸಕ್ತಿದಾಯಕ ಹಾಗೂ ಜ್ಞಾನಾಧಾರಿತವಾಗಿ ಬದಲಿಸಿದರು. ಶಾಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಮಾಡಿದ್ದ 6 ದಳಗಳಿಂದ ಇಬ್ಬರಂತೆ ಆರು ತಂಡಗಳು ಭಾಗವಹಿಸಿದ್ದವು.
ಪರಿಸರ ಸಂಘದ ಸಂಯೋಜಕಿ, ಶಿಕ್ಷಕಿ ಪ್ರತಿಭಾ ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡುವುದರೊಂದಿಗೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನದ ವ್ಯವಸ್ಥೆ ಮಾಡಿ ವಂದಿಸಿದರು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರವರು ಬಹುಮಾನ ನೀಡಿ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದಿದೆ, ಇಂತಹ ರಸಪ್ರಶ್ನೆ ಕಾರ್ಯಕ್ರಮ ತಿಂಗಳಿಗೊಮ್ಮೆ ನಡೆಸುವುದು ಅಗತ್ಯ ಎಂದರು. ಎಲ್ಲಾ ಶಿಕ್ಷಕರು ಕಾರ್ಯಕ್ರಮದ ಒಂದೊಂದು ಸುತ್ತು ನಡೆಸಿ ಕೊಟ್ಟರು.