ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ವಚ್ಛಾಭಾರತ ಪರಿಕಲ್ಪನೆಯಲ್ಲಿ ಪಂಚವರ್ಣ ಸಂಸ್ಥೆ ಹೊಸ ಭಾಷ್ಯ ಬರೆಯಲು ಹೊರಟಿದೆ ಇದು ಶ್ಲಾಘನಾರ್ಹ ಕಾರ್ಯ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಕೋಟ ಗ್ರಾಮಪಂಚಾಯತ್ ಸಂಯೋಜನೆಯಲ್ಲಿ
ಪಂಚವರ್ಣ ಯುವಕ ಮಂಡಲ ಕೋಟ ಮತ್ತು ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ನಡೆಯುತ್ತಿರುವ ಪರಿಸರಸ್ನೇಹಿ ಅಭಿಯಾನ 136ನೇ ವಾರದ ಅಂಗವಾಗಿ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರತಿಯೊಬ್ಬರಿಗೂ ಸ್ವಚ್ಛತೆ ಬಗ್ಗೆ ಅರಿವು ಹಾಗೂ ಕಾಳಜಿ ಅಂತರಾಳದಲ್ಲಿ ಸೃಷ್ಟಿಯಾಗಭೆಕು ಆಗ ಮಾತ್ರ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡಲು ಸಾಧ್ಯ. ಸಂಘಸಂಸ್ಥೆಗಳ ಮೂಲಕ ಸ್ಥಳೀಯಾಡಳಿತಗಳು ಸ್ವಚ್ಛತೆಯ ಬಗ್ಗೆ ಕೈಜೋಡಿಸುತ್ತಿರುವುದು ಗ್ರಾಮಸ್ವಚ್ಛತೆಯ ಹೆಜ್ಜೆ ಇರಿಸಿದಂತೆ ಇಂಥಹ ಕೈಂಕರ್ಯಗಳು ನಿತ್ಯನಿರಂತರವಾಗಿ ಮೊಳಗಲಿ ಗಾಂಧಿಜೀ ಕಂಡ ರಾಮರಾಜ್ಯದ ಕನಸು ಸಾಕಾರಗೊಳ್ಳಲಿ ಎಂದರು.
ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಸದಸ್ಯರಾದ ಶಿವರಾಮ ಶೆಟ್ಟಿ, ಎಸ್.ಎಲ್.ಆರ್.ಎಂ ಘಟಕದ ಮುಖ್ಯಸ್ಥೆ ಲೋಲಾಕ್ಷಿ ಕೋತ್ವಾಲ್, ಪಂಚವರ್ಣ ಯುವಕ ಮಂಡಲ ಕೋಟ ಅಧ್ಯಕ್ಷ ಅಮೃತ್ ಜೋಗಿ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಕಲಾವತಿ ಅಶೋಕ್ , ಯಕ್ಷ ಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.
ಹಂದಟ್ಟು ಮಹಿಳಾ ಬಳಗ, ಯಕ್ಷಸೌರಭ ಕಲಾರಂಗ ಕೋಟ,ಎಸ್ ಎಲ್ ಆರ್ ಎಂ ಘಟಕ ಕೋಟ ಸಹಯೋಗ ನೀಡಿತು.