ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತನ್ನ ಜೀವನದಲ್ಲಿ ಪ್ರಮಾಣಿಕತೆಯೊಂದಿಗೆ ಶಿಸ್ತು, ಕರ್ತವ್ಯ ನಿಷ್ಠೆ, ಆತ್ಮಸ್ಥೇರ್ಯ, ಆದರ್ಶ ವ್ಯಕ್ತಿತ್ವದ ಸದ್ಗುಣಗಳನ್ನು ಹೊಂದಿದ ಹುಯ್ಯಾರು ಪಠೇಲ್ ಹಿರಿಯಣ್ಣ ಶೆಟ್ಟಿಯವರ ಸಾಮಾಜಮುಖಿ ಕಾರ್ಯಕ್ರಮಗಳು ಜನರ ಜೀವನದಲ್ಲಿ ಬದಲಾವಣೆಗೆ ಸಾಧ್ಯವಾಗಿದೆ. ಹುಯ್ಯಾರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಸಾಮಾಜಮುಖಿ ಸೇವಾ ಕಾರ್ಯಗಳು ಜನರ ಹೆಗ್ಗಳಿಕೆಗಳಿಗೆ ಪಾತ್ರವಾಗಿವೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಇದರ ಪ್ರವರ್ತಕ, ಮೈಸೂರ್ ಮರ್ಕಂಟೈಲ್ ಕಂ, ಉದ್ಯಮಿ, ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿ (ಎಚ್.ಎಸ್.ಶೆಟ್ಟಿ) ಹೇಳಿದರು.
ಅವರು ಹೈಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹುಯ್ಯಾರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ನೇತ್ರತ್ವದಲ್ಲಿ ಹಮ್ಮಿಕೊಂಡ ಹುಯ್ಯಾರು ಪಠೇಲ್ ಚಾರಿಟೇಬಲ್ ಟ್ರಸ್ಟ್ 10 ನೇ ವರ್ಷದ ವಾರ್ಷಿಕ ದಿನಾಚರಣೆ ಪ್ರಯುಕ್ತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷರ್ಚನೆ ಸಲ್ಲಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಅನ್ಯಾಯಕ್ಕೆ ಒಳಗಾಗಿ ಸಮಸ್ಯೆಯಾದವರಿಗೆ ಮತ್ತು ಜನರು ಸ್ವತಂತ್ರರಾಗಿ ದುಡಿದು ತಿಂದು ಬದುಕಬೇಕು ಈ ಮೂಲಕ ಪ್ರ್ರಾಮಾಣಿಕ ನ್ಯಾಯ ಒದಗಿಸಿಕೊಟ್ಟವರು. ಹುಯ್ಯಾರು ಪಠೇಲ್‍ರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಇವರ ಪ್ರಮಾಣಿಕತೆ ಪ್ರಶಂಸನೀಯ, ಇವರ ಸಾಧನೆಯು ಮುಂದಿನ ಯುವ ಜನರಿಗೆ ಪ್ರೇರಣೆಯಾಗಲಿದೆ. ಹುಯ್ಯಾರು ಪಠೇಲ್ ಕುಟುಂಬಸ್ಥರು ಹುಯ್ಯಾರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ವೈದ್ಯಕೀಯ,ಶೈಕ್ಷಣಿಕ,ಧಾರ್ಮೀಕ, ಆಶಕ್ತ ಜನರಿಗೆ ಸಹಾಯ ಸೇರಿದಂತೆ ಹಲವಾರು ಸಾಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಯಶಸ್ಸು ಗೊಳಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಉಡುಪಿ ಜಿಲ್ಲಾ ರೈತ ಸಂಘದ ಮೂಲಕ ಕೃಷಿಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದು ಶ್ರೇಷ್ಠ ಕಾರ್ಯವಾಗಿದೆ,ರೈತರಿಗೆ ಟ್ರಸ್ಟ್ ಮೂಲಕ ಇನ್ನೂ ಹೆಚ್ಚಿನ ಸೌಲಭ್ಯಗಳು ಸಿಗುವಂತಾಗಲಿ ಎಂದರು.
ಹುಯ್ಯಾರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ರತ್ನಾಕರ ಶೆಟ್ಟಿ ಹುಯ್ಯಾರು ಅಧ್ಯಕ್ಷತೆ ವಹಿಸಿದರು.
ಕುಂದಗನ್ನಡ ರಾಯಭಾರಿ, ಮನು ಹಂದಾಡಿ ಮಾತನಾಡಿ,
ಬಾಲ್ಯದ ದಿನಗಳಲ್ಲಿ ಶಾಲೆಯ ಪುಸ್ತಕ ಓದಬೇಕಾದ ಮಕ್ಕಳು ಮೋಬಾಯಿಲ್, ಟಿ.ವಿ ಗಳಲ್ಲಿ ಬರುವ ದರ್ಶದ ಕೆಲವು ಕಾರ್ಯಕ್ರಮಗಳನ್ನು ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಹಲವು ಮಕ್ಕಳು ವ್ಯತೀರೀಕ್ತ ಮನಸ್ಥಿಯಲ್ಲಿದ್ದಾರೆ, ಕಲಿಕೆಯಲ್ಲಿ ಅಸಕ್ತಿ ಕಳೆದು ಕೊಳ್ಳುತ್ತಿದ್ದಾರೆ. ಸುಳ್ಳು ಹೇಳುವುದು ಹಾಗೂ ಮೋಸಗೊಳಿಸುವುದರಲ್ಲಿ ಯಾವುದೇ ಬೇಸರ ಇಲ್ಲದೇ ದುಸ್ಸಾಹಸ್ಸಕ್ಕೆ ಮುನ್ನುಗ್ಗುತ್ತಿದ್ದಾರೆ, ತಂದೆ, ತಾಯಿ, ಹಿರಿಯರ ಯಾವುದೇ ಒಳ್ಳೆಯ ಮಾತುಗಳನ್ನು ಕೇಳುವ ಪರಿಸ್ಥಿತಿಯನ್ನು ಕಳೆದು ಕೊಳ್ಳುತ್ತಿದ್ದಾರೆ. ದೇವರಿಗೆ ಸಮಾನರಾದ ತಂದೆ,ತಾಯಿ,ಹಿರಿಯರಿಗೆ ಅಗೌರವ ನೀಡುತ್ತಿರುವುದು ಬೇಸರದ ಸಂಗತಿಯಾಗಿದೆ. ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಕನಸು ಕಾಣುತ್ತಿರುವವರಿಗೆ ನಿರಾಸಕ್ತಿ ಮೂಡಿಸುವಂತಾಗಿದೆ. ಮಕ್ಕಳಿಗೆ ಮೋಬೈಲ್ ,ಟಿ.ವಿ ವ್ಯಾಮೋಹದಿಂದ ದೂರವಿರಿಸಿ,ಓದು ಹಾಗೂ ಸುಸಂಸ್ಕೃತ ಜೀವನದ ಬಗ್ಗೆ ಅಸಕ್ತಿ ಮೂಡಿಸುವಲ್ಲಿ ಪೋಷಕರು ಹೆಚ್ಚಿನ ಕಾಳಜಿ ವಹಿಸ ಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ, ಹೈಕಾಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸತೀಶ್, ಹೈಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗರಾಜ ಪಿ.ಆರ್,ಹುಯ್ಯಾರು ಪಠೇಲ್ ಚಾರಿಟೇಬಲ್ ಟ್ರಸ್ಟ್ ಆಡಳಿತ ಮಂಡಳಿ ಪದಾಧಿಕಾರಿಗಳು, ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ಚೈತ್ರ ಅಡಪ ಮೊಳಹಳ್ಳಿ ಇವರನ್ನು ಜ್ಯೋತಿ ಪಿ ಶೆಟ್ಟಿ ಹಾಗೂ ಡಾ.ವೃಂದ ಶೆಟ್ಟಿ ಸನ್ಮಾನಿಸಿದರು, ಕುಂದಗನ್ನಡ ರಾಯಭಾರಿ ಮನು ಹಂದಾಡಿಯವರಿಂದ ನಗೆಹನಿ,ಕು.ದಿಶಾ ಜಗದೀಶ್ ಆಚಾರ್ಯ ಕಕ್ಕುಂಜೆಯವರಿಂದ ಯಕ್ಷಗಾನ ನೃತ್ಯ ನಡೆಯಿತು.
ನ್ಯಾಯವಾದಿ ರವಿರಾಜ ಶೆಟ್ಟಿ ಮುಡುವಳ್ಳಿ ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ಪ್ರಾಸ್ತಾವಿಕ ಮಾತನಾಡಿದರು. ಸೂರ್ಯಪ್ರಕಾಶ ದಾಮ್ಲೆ ಸಬ್ಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಸತೀಶ್ ಎಚ್.ಎಂ ವಂದಿಸಿದರು.