ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ದೇವಳದಲ್ಲಿ ವೇ.ಮೂ.ಮಧುಸೂದನ ಬಾಯರಿ ನೇತ್ರತ್ವದಲ್ಲಿ ದುರ್ಗಾಹೋಮ, ಸಪ್ತಸತೀ ಚಂಡಿಕಾಪಾರಾಯಣ, ಹೂವಿನ ಪೂಜೆ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೆರಿತು. ಪೂಜಾ ವಿಧಿವಿಧಾನದಲ್ಲಿ ಪೌರೋಹಿತ್ಯದಲ್ಲಿ ರಾಜೇಂದ್ರ ಅಡಿಗ, ಚಂದ್ರಶೇಖರ ಮಯ್ಯ, ಸುಬ್ರಹ್ಮಣ್ಯ ಹೊಳ್ಳ, ಕರುಣಾಕರ ಐತಾಳ್, ಮಂಜುನಾಥ ಹೊಳ್ಳ ಭಾಗಿಯಾದರು. ಬುಧವಾರ ವಿಜಯದಶಮಿಯ ಕೊನೆಯ ದಿನದ ಅಂಗವಾಗಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳು ಪೂಜಾ ಕೈಂಕರ್ಯದಲ್ಲಿಭಾಗವಹಿಸಿ ಸೇವೆ ಸಲ್ಲಿಸಿದರು.
ದೇವಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತೀಶ್ ಹೆಗ್ಡೆ, ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ, ರಾಮದೇವ ಐತಾಳ್, ಸುಂದರ್ ಸಾಲಿಗ್ರಾಮ, ಸುಶೀಲಸೋಮಶೇಖರ್, ಜ್ಯೋತಿ ಶೆಟ್ಟಿ, ಜೋಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ, ಸುರೇಶ್ ಗಾಣಿಗ ಸಾವಿರಾರು ಭಕ್ತರು ಶ್ರೀದೇವಳದ ಪೂಜಾ ಹಾಗೂ ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾದರು.