ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ವಂಡ್ಸೆ ಕೆಳಪೇಟೆ ಪಂಜು ಪೂಜಾರಿ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಹೆವೆನ್ಸ್ ಬೇಕರಿ ಮತ್ತು ಕೇಕ್ ಪ್ಯಾಲೇಸ್ ಅ.೭ರಂದು ಶುಭಾರಂಭಗೊಂಡಿತು.
ಕೇಕ್ ಹಾಗೂ ಬೇಕರಿ ಉತ್ಪನ್ನಗಳನ್ನು ಇಲ್ಲಿಯೇ ನುರಿತರಿಂದ ತಯಾರಿಸಲಾಗುತ್ತಿದ್ದು, ಸುಧಾರಿತವಾದ ಯಂತ್ರೋಪಕರಣಗಳ ಬಳಕೆ ಮಾಡಲಾಗಿದೆ. ಹಲವಾರು ರೀತಿಯ ಕೇಕ್‌ಗಳು ಇಲ್ಲಿ ಲಭ್ಯವಿದೆ.
ಹುಟ್ಟು ಹಬ್ಬಕ್ಕಾಗಿಯೇ ಹಲವಾರು ವೈವಿಧ್ಯಮಯ ಕೇಕ್‌ಗಳು ಗ್ರಾಹಕರ ಅಭಿರುಚಿಗನುಗುಣವಾಗಿ ಲಭ್ಯವಿದೆ.
ಮದುವೆ ಇತ್ಯಾದಿ ಶುಭ ಸಮಾರಂಭಗಳಿಗಾಗಿ ವಿಶೇಷವಾದ ಕೇಕ್ ಸಹ ಇಲ್ಲಿ ದೊರೆಯುತ್ತದೆ. ಗ್ರಾಹಕರ ಬೇಡಿಕೆಕ್ಕನುಗುಣವಾಗಿ ಬರ್ತಡೆ ಕೇಕ್ ಮಾಡಿಕೊಡಲಾಗುವುದು. ಶುಚಿ-ರುಚಿ-ಗುಣಮಟ್ಟದ ಕೇಕ್ ಹಾಗೂ ಬೇಕರಿ ಉತ್ಪನ್ನಗಳು ಇಲ್ಲಿ ದೊರೆಯುತ್ತದೆ. ಹೋಂ ಡೆಲಿವರಿ ವ್ಯವಸ್ಥೆಯೂ ಇದೆ ಎಂದು ಸಂಸ್ಥೆಯ ಮಾಲೀಕರಾದ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ.