ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ: ಶ್ರೀ ವಿ.ವಿ.ವಿ ಮಂಡಳಿ(ರಿ) ಹೆಮ್ಮಾಡಿ ಇದರ ಸಾಮಾನ್ಯ ಸಭೆಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಗಣೇಶ ಮೊಗವೀರರವರನ್ನು ಪದನಿಮಿತ್ತ ನಾಮ ನಿರ್ದೇಶಕರನ್ನಾಗಿ ಆಯ್ಕೆ ಮಾಡಿ ಶ್ರೀ ವಿ.ವಿ.ವಿ.ಮಂಡಳಿ(ರಿ) ಗೆ ಸೇರ್ಪಡೆಗೊಳಿಸಲಾಯಿತು.
ಗಣೇಶ ಮೊಗವೀರರವರು ಸಮರ್ಪಣಾ ಎಜುಕೇಶನ್ ಟ್ರಸ್ಟ್(ರಿ) ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.