ಹಂಗಳೂರು :ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್

0
1081

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್ ಮಿಲಾದ್ ಆಚರಣೆ ಮಾಡಲಾಯಿತು.

Click Here

ಹಂಗಳೂರು ಮೊಯಿದ್ದೀನ್ ಜುಮ್ಮಾ ಮಸೀದಿಯ ಖತೀಬ್ ಹಂಗಳೂರು ಜುಮ್ಮಾ ಮಸೀದಿಯ ಅಬೂಬಕ್ಕರ್ ಸಿದ್ಧೀಖ್ ಸಖಾಫಿ ಮಾತನಾಡಿ ಪ್ರವಾದಿ ಮುಹಮ್ಮದ್ ಅವರು ಅರಾಜಕತೆ, ಕೊಲೆ, ದುಷ್ಕೃತ್ಯಗಳು ತಾಂಡವಾಡುತ್ತಿರುವ ಕಾಲದಲ್ಲಿ ಜನಿಸಿದ್ದು, ಆ ಕಾಲದಲ್ಲಿ ಮಾದರಿ ಸಮಾಜವನ್ನಾಗಿ, ಸಮೂಹವನ್ನಾಗಿ ಮಾರ್ಪಡಿಸಿದ್ದರು. ಇದಕ್ಕೆ ಪ್ರವಾದಿಯವರ ಉದಾತ್ತ ಮಾರ್ಗದರ್ಶನ, ಜೀವನ ಶೈಲಿ, ಮಾತುಗಳೆಲ್ಲ ಒಳ್ಳೆಯ ರೀತಿಯಲ್ಲಿ ಜೀವನ ನಡೆಸಲು ಪ್ರೇರಣೆಯಾಗಿತ್ತು. ಎಲ್ಲ‌ ಜಾತಿ ಧರ್ಮ, ಮತದವರು ಸಹಬಾಳ್ವೆ, ಸಮಾನತೆಯಿಂದ ಬಾಳುವಂತೆ ಕರೆ ನೀಡಿದರು. ದ್ವೇಷ ಭಾವನೆ, ಭಯದಿಂದ ಹುಟ್ಟಿಸುವಂತಾಗಬಾರದು ಎಂದಿದ್ದರು, ಅಸೂಯೆ ಉಳ್ಳವರಾಗಬಾರದು ಎಂದು ಕರೆ ನೀಡಿದ್ದರು ಎನ್ನುವುದಾಗಿ ಹೇಳಿದರು.

ಹಂಗಳೂರು ಮಸೀದಿಯಿಂದ ಹೊರಟ ಮೆರವಣಿಗೆ ವಿನಾಯಕದಿಂದ ಅಂಕದಕಟ್ಟೆ ಸಾಗಿ ಹಂಗಳೂರು ಮಸೀದಿ ಸಮೀಪ ಅಂತಿಮ ಗೊಂಡಿತು. ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಭಾಂಧವರು ಪಾಲ್ಗೊಂಡರು.

ಖತೀಬ್ ಹಂಗಳೂರು ಜುಮ್ಮಾ ಮಸೀದಿಯ ಉಪಾಧ್ಯಕ್ಷ ಬಾಬು ಕಲಂದರ್, ಮಾಜಿ ಉಪಾಧ್ಯಕ್ಷ ‌ಶಬಾನ್ ಹಾಗೂ ಭಾಷ ಸಾಹೇಬ್, ಕಾರ್ಯದರ್ಶಿ ರಶೀಧ್, ಖಜಾಂಚಿ ಅಬುಶೇಟ್, ಜಮಾತಿನ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here