ಎಂಸಿಸಿ ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವ ಕುಂದಾಪುರ ಶಾಖೆಯ ಗ್ರಾಹಕರ ಸಮಾವೇಶ

0
473
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಎಂ.ಸಿ.ಸಿ. ಬ್ಯಾಂಕ್ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ 110 ವರ್ಷ ಪೂರೈಸಿದೆ. ಗ್ರಾಹಕರ ಪ್ರೋತ್ಸಾಹ, ಸಹಕಾರದಿಂದ ಬ್ಯಾಂಕ್ ಸದೃಢವಾಗಿ ಬೆಳೆಯುತ್ತಿದ್ದು, ಸೇವೆಯಲ್ಲೂ ಮುಂಚೂಣಿಯಲ್ಲಿದೆ ಎಂದು ಕುಂದಾಪುರ ವಲಯದ ಧರ್ಮಗುರುಗಳು ವಂದನೀಯ ಫಾ.ಸ್ಟ್ಯಾನಿ ತಾವ್ರೊ ಹೇಳಿದರು.
Video :-

Click Here

ಅವರು ಭಾನುವಾರ ಇಲ್ಲಿನ ಸಂಗಮ್ ಜಂಕ್ಷನ್ ಹತ್ತಿರದ ಸೈಮನ್ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆದ ಎಂ.ಸಿ.ಸಿ. ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಕುಂದಾಪುರ ಶಾಖೆಯ ಗ್ರಾಹಕರ ಸಮಾವೇಶವನ್ನು ‌ಉದ್ಘಾಟಿಸಿ ಮಾತನಾಡಿದರು.
ಎಂ.ಸಿ.ಸಿ.ಬ್ಯಾಂಕ್(ಲಿ.) ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಗ್ರಾಹಕರನ್ನು ಸನ್ಮಾನಿಸಲಾಯಿತು. ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂ. ನಿವೃತ್ತ ಅಧಿಕಾರಿ ವಿಲ್ಫ್ರೆಡ್ ಡಿಸೋಜಾ, ಜೆಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೈನ್ ಹೈಕಾಡಿ, ಕುಂದಾಪುರ  ತಾ.ಪಂ. ಮಾಜಿ ಸದಸ್ಯ ಪ್ರಭು ಕೆನಡಿ ಪಿರೇರಾ, ಕುಂದಾಪುರ ಪುರಸಭೆ ಸದಸ್ಯೆ ರೋಹಿಣಿ ಉದಯ ಕುಮಾರ್ , ಎಂ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಡಿಸೋಜಾ, ಕುಂದಾಪುರ ಶಾಖಾ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್, ಆಡಳಿತ ಮಂಡಳಿಯ ನಿರ್ದೇಶಕರು, ಮಹಾಪ್ರಬಂಧಕರು, ಉಪ ಮಹಾಪ್ರಬಂಧಕರು ಉಪಸ್ಥಿತರಿದ್ದರು.
ಎಂ.ಸಿ.ಸಿ.ಬ್ಯಾಂಕ್ ಶಾಖಾ ನಿರ್ದೇಶಕ ಎಲ್ರೊರೈ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಮಾಲಿನಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಮಹಾಪ್ರಬಂದಕ ಸುನಿಲ್ ಮಿನೆಜಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಖಾ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ವಂದಿಸಿದರು.

LEAVE A REPLY

Please enter your comment!
Please enter your name here