ಕೋಟೇಶ್ವರದ ಯುವ ಮೆರಿಡಿಯನ್ ಗ್ರೂಪ್ಸ್ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ

0
432

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕೋಟೇಶ್ವರ ಯುವ ಮೆರಿಡಿಯನ್ ಗ್ರೂಪ್ಸ್‍ನ ಸೇವೆ, ಸಾಧನೆಗೆ “ಪ್ರತಿಷ್ಠಿತ ದಿ ಟೈಮ್ಸ್ ಗ್ರೂಪ್ ಎಕ್ಸಲೆನ್ಸಿ ಇನ್ ಲಕ್ಷುರಿ ಎಂಡ್ ಲೈಸುರ್ ಸ್ಟೇಗಾಗಿ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿ ನಿಟ್ಟೆ-ಕೆಬಿಎಲ್ ಎಂಎಸ್‍ಎಂಇ ಬ್ಯುಸಿನೆಸ್ ಎಕ್ಸಲೆನ್ಸಿ ಅವಾರ್ಡ್-2022 ಲಭಿಸಿದೆ. ಬೆಸ್ಟ್ ಇನೋವೇಟಿವ್ ಎಂಟರ್‍ಪ್ರೈಸಸ್ ಅವಾರ್ಡ್‍ನ್ನು ಎಐಸಿ ನಿಟ್ಟೆ ಹಾಗೂ ಕರ್ಣಾಟಕ ಬ್ಯಾಂಕ್ ಜಂಟಿಯಾಗಿ ಪ್ರದಾನ ಮಾಡಿದೆ ಎಂದು ಯುವ ಮೆರಿಡಿಯನ್ ಸಂಸ್ಥೆಯ ಆಡಳಿತ ಪಾಲುದಾರರಾದ ಬಿ.ಉದಯಕುಮಾರ್ ಶೆಟ್ಟಿ ತಿಳಿಸಿದರು.

ಅವರು ಅ.12ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.

ದಶಕಗಳಿಂದ ಕೋಟೇಶ್ವರದಂತಹ ಗ್ರಾಮೀಣ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಸೇವೆ ನೀಡಿಕೊಂಡು ಬರುತ್ತಿರುವ ಸಂಸ್ಥೆಯು ಅಂತರಾಷ್ಟ್ರೀಯ ಖ್ಯಾತಿಯ ಯುವ ಮೆರಿಡಿಯನ್ ಸ್ಟಾ ವಿಭಾಗವು ನೀಡುತ್ತಿರುವ ಸೇವೆಯಿಂದಾಗಿ ಅಂತರಾಷ್ಟ್ರೀಯ ಮನ್ನಣೆ, ಗೌರವಕ್ಕೆ ಪಾತ್ರವಾಗಿದ್ದಲ್ಲದೆ ರಾಜ್ಯದ ಪ್ರತಿಷ್ಠಿತ ಮುಂಚೂಣಿಯ ಹೋಟೆಲ್‍ಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಪ್ರವಾಸೋದ್ಯಮಕ್ಕೆ ನೀಡುತ್ತಿರುವ ಉತ್ತಮ ಸಹಕಾರಕ್ಕಾಗಿ ಯುವ ಮೆರಿಡಿಯನ್ ಗ್ರೂಪ್ ಸತತ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನವಾಗುತ್ತಿದೆ ಎಂದರು.

Click Here

Click Here

ಆತಿಥ್ಯ, ಕರಾವಳಿ ತೀರಗಳ ದರ್ಶನ, ವಿಶ್ವದರ್ಜೆಯ ವಸತಿಗೃಹ ಹೊಂದಿರುವ ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಪಾ ವಿಶ್ವಖ್ಯಾತಿಗೆ ಪಾತ್ರವಾಗಿದೆ. ಐಶಾರಾಮಿ ಪೆÇೀರ್ ಸ್ಟಾರ್ ಡಿಲಕ್ಸ್ ರೆಸಾರ್ಟ್ ಇದಾಗಿದ್ದು ಲಕ್ಸೂರಿಯಸ್ ರೂಮ್ಸ್ ಮತ್ತು ವಿಶಾಲ ಕನ್‍ವೆನ್ಸನ್ ಸವಲತ್ತು ಹೊಂದಿರುವ ಕರ್ನಾಟಕ ಕರಾವಳಿಯ ಏಕೈಕ ಸಂಸ್ಥೆ ಪ್ರತಿಯೊಂದು ರೂಮುಗಳು ಆರೋಗ್ಯಪೂರ್ಣ ವಾತಾವರಣದಿಂದ ಕೂಡಿದೆ. ಎಕ್ಸಿಕ್ಯೂಟಿವ್ ರೂಮ್, ಸೂಪರಿಯರ್ ರೂಮ್, ಕ್ಲಬ್ ರೂಮ್ಸ್, ಡಿಲಕ್ಸ್ ರೂಮ್ಸ್, ಸೂಟ್ ರೂಮ್ಸ್‍ಗಳು ಇಲ್ಲಿವೆ. ಸ್ಥಳೀಯ ಆಹಾರ ಖಾದ್ಯಗಳು ಲಭಿಸುತ್ತವೆ. ಸ್ವಾಸ್ಥ್ಯ ಮೆರಿಡಿಯನ್ ನೇಚರ್ ಕ್ಯೂರ್ ಯೋಗ ಕೇಂದ್ರ ಇಲ್ಲಿದೆ. ಪ್ರವಾಸಿಗರಿಗೆ ಪ್ರಕೃತಿ ಚಿಕಿತ್ಸೆ, ಯೋಗ ಸೌಕರ್ಯ ಒದಗಿಸಲಾಗಿದೆ. 30 ಸಾವಿರ ಚದರ ವಿಸ್ತೀರ್ಣದ ಬೇ ರೇಸಾರ್ಟ್ ಎಂಡ್ ಸ್ಟಾ ವೀಕ್ಷಣೆಗೆ ಮನಸ್ಸಿಗೆ ಮುದ ನೀಡುತ್ತದೆ. ಸ್ಟಾದಲ್ಲಿ ಅತ್ಯಾಧುನಿಕ ಸ್ವಿಮ್ಮಿಂಗ್ ಪೂಲ್, ಜಿಮ್ ಜತೆಯಲ್ಲಿ ಚೆಸ್, ಕ್ಯಾರಮ್, ಸೂಕರ್, ಲಾಂಗ್ ಟೆನ್ನಿಸ್, ಪುಟ್ಬಾಲ್, ಬ್ಯಾಡ್ಮಿಂಟನ್, ವಾಲಿಬಾಲ್, ಕ್ರಿಕೆಟ್, ಎಟಿವಿ ಬೈಕ್ ರೈಡ್, ಗಾಲ್ಫ್ ಕಾರ್‍ರೈಡ್ ಮತ್ತು ಸೈಕ್ಲಿಂಗ್‍ಗೆ ಅವಕಾಶವಿದೆ ಎಂದರು.

2012ರಲ್ಲಿ ಯುವ ಇನ್ಸಾಸ್ಟಕ್ಟರ್ ಆರಂಭಗೊಂಡಿದ್ದು ವಿಶ್ವಖ್ಯಾತಿಯ ಕನ್ವೆನ್ಸನ್ ಸೆಂಟರ್, ಅಮ್ಯೂಸ್‍ಮೆಂಟ್ ಪಾರ್ಕ್, ಮಿನಾಲ್ ಬಾಂಕ್ವೆಟ್ ಮಿನಿ ಹಾಲ್, ಓಪೆರಾ ಪಾರ್ಕ್ ಅಲ್ಲದೆ ವಿಶಾಲ ಪಾರ್ಕಿಂಗ್ ಒಳಗೊಂಡಿದೆ. ಬಾನಯಾನ ಟ್ರೀ ಆವರಣದಲ್ಲಿ ತೆರೆದ ಅಂಕಣದಲ್ಲಿ 3 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಸುಂದರ ಪರಿಸರ ರೂಪಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ ವಿಶ್ವದರ್ಜೆಯ ಸೌಂಡ್ ಪ್ರೂಪ್ ಬಾಂಕ್ವೆಟ್ ಹಾಲ್ ಗ್ರಾಮೀ ಬಾಲ್ ರೂಮ್ ಸೇವೆಗೆ ಸಜ್ಜುಗೊಂಡಿದೆ. 1200 ಮಂದಿ ಏಕಕಾಲದಲ್ಲಿ ಕುಳಿತು ವೀಕ್ಷಿಸಬಹುದಾದ ಸಭಾಂಗಣವಿದು. ಯುವ ಕನ್‍ವೆನ್ಸನ್ ಸೆಂಟರ್ ಮತ್ತು ಅಮ್ಯೂಸ್ ಮೆಂಟ್ ಅತಿ ಹೆಚ್ಚು ಜನಪ್ರಿಯತೆ ಗಳಿಸಿದೆ. ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಆಸ್ವಾದಿಸುತ್ತಿದ್ದಾರೆ. ಕುಟುಂಬ ಸಮೇತರಾಗಿ ಸಮಯ ಕಳೆಯಲು ಅನುಕೂಲವಾಗಿದೆ. ಕರಾವಳಿ ಜಿಲ್ಲೆಯಲ್ಲೇ ಸಂಸ್ಥೆಯ ಹೋಟೆಲ್ ಸಹಿತ ಇನ್ನಿತರ ವ್ಯವಸ್ಥೆಗಳು ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿರುವ ಬಗ್ಗೆ ಪ್ರವಾಸಿಗರು ಮೆಚ್ಚುಗೆ ಸೂಚಿಸುತ್ತಿರುವುದು ಅತೀವ ಸಂತಸ ತಂದಿದೆ. ಸಂಸ್ಥೆಯು ದೇಶದ ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಕೈಜೋಡಿಸುತ್ತಿರುವ ಬಗ್ಗೆ ಹೆಮ್ಮೆಯಿದೆ ಎಂದರು.

ಈವರೆಗಿನ ಸಂಸ್ಥೆ ಕಾರ್ಯಚಟುವಟಿಕೆ ಗುರುತಿಸಿ 2015ರಿಂದ 2018ರ ತನಕ ನಿರಂತರವಾಗಿ ಅಂತರಾಷ್ಟ್ರೀಯ ಗಾಲ್ ಬಿಬೋ ಅವಾರ್ಡ್, 2016 ಮತ್ತು 17ರಲ್ಲಿ ಇಂಡಿಯಾ ಬೆಸ್ಟ್ ಹಾಸ್ಪಿಟಾಲಿಟಿ ಹಾಗೂ ಸೌತ್ ಬೆಸ್ಟ್ ರೆಸಾರ್ಟ್ ಪ್ರಶಸ್ತಿ, 2021ರಲ್ಲಿ ಟೈಮ್ಸ್ ಆಫ್ ಇಂಡಿಯಾದ ಬ್ಯುಸಿನೆಸ್ ಅವಾರ್ಡ್, ಅಗೋಧ ಬೆಸ್ಟ್ ರೆಸಾರ್ಟ್ ಅವಾರ್ಡ್, ಟ್ರಿಪ್ ಎಡ್ವೈಸರ್ ಬೆಸ್ಟ್ ಅವಾರ್ಡ್, ಬುಕ್ಕಿಂಗ್ ಡಾಟ್ ಕಾಮ್ ಟ್ರಾವೆಲ್ಲರ್ ಅವಾರ್ಡ್, ಕೊಚ್ಚಿ ಐಐಟಿಎಂ 2018ರಲ್ಲಿ ಇಂಡಿಯಾ ಇಂಟರ್‍ನೇಶನಲ್ ವೆಡ್ಡಿಂಗ್ ಡೆಸ್ಟಿನೇಶನ್ ಅವಾರ್ಡ್ ನೀಡಿ ಗೌರವಿಸಿದೆ ಎಂದರು.

ಯುವ ಮೆರಿಡಿಯನ್ ಬೇ ರೇಸಾರ್ಟ್ ಎಂಡ್ ಸ್ಟಾ ನಿಂದಾಗಿ ಬೆಳೆಯುತ್ತಿರುವ ನಗರಕ್ಕೆ ಪೂರಕವಾಗಿದೆ, ವಿಶಾಲ 1,58,000ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಯುವ ಮೆರಿಡಿಯನ್ ಕನ್ವೆನ್ಸನ್ ಸೆಂಟರ್, ಮೆರಿಡಿಯನ್ ಬೇ ರೆಸಾರ್ಟ್ ಎಂಡ್ ಸ್ಪಾ, ಮಿನಾಲ್, ಓಪೆರಾ ಪಾರ್ಕ್, ರಾಯಲ್ ಪಾಮ್ (ತೆರೆದ ಸಭಾಂಗಣ), ಮೀಟಿಂಗ್ ಹಾಲ್, ಸೆನೆಟ್, ಪೂಲ್ ಡೆಕ್, ಬೋರ್ಡ್ ರೂಮ್ ಒಳಗೊಂಡಿದೆ. ಪ್ರವಾಸಿಗರಿಗೆ ಕುಂದಾಪುರ ಸುತ್ತಮುತ್ತಲಿನ ಅತ್ಯುತ್ತಮ ಬೀಚ್, ಪ್ರಾಚೀನ ದೇಗುಲ, ವಿಪುಲ ಸೌಂದರ್ಯದ ಪಶ್ಚಿಮಘಟ್ಟಗಳ ದರ್ಶನ ಮಾಡಿಸಲಾಗುತ್ತಿದೆ. ಹೆಲಿಟೂರಿಸಂ ಕುಂದಾಪುರಕ್ಕೆ ಮೊದಲಿಗೆ ಪರಿಚಯಿಸಿರುವ ಸಂಸ್ಥೆಯೂ ವಿಶ್ವದ ನಾನಾ ಕಡೆಯ ಪ್ರವಾಸಿಗರನ್ನು ಹೆಲಿಕಾಪ್ಟರ್ ಮೂಲಕ ಕುಂದಾಪುರದ ಬೀಚ್, ಪಶ್ಚಿಮಘಟ್ಟಗಳ ದರ್ಶನ ಮಾಡಿಸಿದೆ. ಹೋಟೆಲ್‍ನಲ್ಲಿ ತಂಗುವ ಪ್ರವಾಸಿಗರಿಗೆ ಸೀಸ್ಪೋರ್ಟ್ಸ್‍ನ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಪರಿಸರ ಸ್ನೇಹಿ ವಾತಾವರಣ ಇಲ್ಲಿಯದು. ಇಲ್ಲಿನ ಪ್ರಕೃತಿಯ ರಮ್ಯತೆಗಾಗಿ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಇದೀಗ ಆಗಮಿಸುತ್ತಿದ್ದಾರೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಯುವ ಮೆರಿಡಿಯನ್ ಸಂಸ್ಥೆಯ ಆಡಳಿತ ಪಾಲುದಾರರಾದ ಬಿ. ವಿನಯ ಕುಮಾರ್ ಶೆಟ್ಟಿ, ಜನರಲ್ ಮೆನೇಜರ್ ಶರತ್ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here