ಕುಂದಾಪುರ ಮಿರರ್ ಸುದ್ದಿ…
ಉಪ್ಪುಂದ : ಬೈಂದೂರು ತಾಲೂಕಿನ ಉಪ್ಪುಂದದ ಸುಮುಖ ಗ್ರೂಫ್ ಆಫ್ ಇಂಡಸ್ಟ್ರೀಸ್ ಗುಣಮಟ್ಟಕ್ಕೆ ಮತ್ತೊಂದು ಗರಿ ಮೂಡಿದೆ. ಸುಮುಖ ಗ್ರೂಪ್ ನ ಅಂಗಸಂಸ್ಥೆಯಾದ ಆಡ್ ಕ್ರೀಟ್ ಸಂಸ್ಥೆಯ ಪ್ರಾಡಕ್ಟ್ ಗೆ ಐ.ಎಸ್.ಐ ಮಾನ್ಯತೆ ದೊರಕಿದೆ. ಇದರಿಂದಾಗಿ ಆಡ್ ಕ್ರೀಟ್ ಉತ್ಪನ್ನಗಳ ಗುಣಮಟ್ಟದಲ್ಲಿ ಗ್ರಾಹಕರಿಗೆ ಇನ್ನು ಮುಂದೆ ಖಾತರಿ ದೊರೆಯಲಿದೆ ಎಂದು ಸುಮುಖ ಗ್ರೂಪ್ ಆಪ್ ಇಂಡಸ್ಟ್ರೀಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್.ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದಿಂದ ಉದ್ಯೋಗಕ್ಕಾಗಿ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಆರಂಭಗೊಂಡ ಸುಮುಖ ಗ್ರೂಪ್ ಆಪ್ ಇಂಡಸ್ಟ್ರೀಸ್ ಸಂಸ್ಥೆಯು ಸಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ ಲಿಮಿಟೆಡ್ ಸಂಸ್ಥೆಯನ್ನು 2012ರಲ್ಲಿ ಆರಂಭಿಸಿತ್ತು. ಬಳಿಕ 2016ರಲ್ಲಿ ಆಡ್ ಕ್ರೀಟ್ ಕನ್ಸ್ಟ್ರಕ್ಷನ್ ಟೆಕ್ನೋಲಜಿ ಇಂಡಿಯಾ ಪ್ರೈ ಲಿಮಿಟೆಡ್ ಸಂಸ್ಥೆ ಆರಂಭಗೊಂಡಿತ್ತು.
ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಗ್ರೌಟ್, ಅಡೆಸಿವ್, ಎಪಾಕ್ಸಿ, ವಾಟರ್ ಪ್ರೂಫಿಂಗ್, ವಾಲ್ ಪುಟ್ಟಿ, ಪ್ರೈಮರ್, ಕ್ಲೀನರ್ ಮೊದಲಾದ ರಾಸಾಯನಿಕ ಉತ್ಪನ್ನಗಳನ್ನು ಸಿದ್ಧಪಡಿಸುವ ಈ ಸಂಸ್ಥೆಯು ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮೊದಲಾದ ರಾಜ್ಯಗಳಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಇದೀಗ ಆಡ್ ಕ್ರೀಟ್ ಉತ್ಪನ್ನಕ್ಕೆ ಐ.ಎಸ್.ಐ. ಮಾನ್ಯತೆ ದೊರಕುವ ಮೂಲಕ ಗ್ರಾಹಕರಿಗೆ ತನ್ನ ಉತ್ಪನ್ನಗಳ ಮೇಲೆ ಹೆಚ್ಚಿನ ಭದ್ರತೆ ನೀಡಿದಂತಾಗಿದೆ ಎಂದು ಸುರೇಶ್ ಶೆಟ್ಟಿ ಹೇಳಿದ್ದಾರೆ.