ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕದ ಮಲೆನಾಡಿನ ಭಾಗಗಳಲ್ಲಿ ಕಾಣಿಸಿಕೊಂಡಿರುವ ಅಡಿಕೆ ಮರದ ಎಲೆ ಚುಕ್ಕಿ ರೋಗದ ಬಗ್ಗೆ ಆಧ್ಯಯನ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರದ ಕೃಷಿ, ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರು ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ (ಐಸಿಎಆರ್)ಗೆ ನಿರ್ದೆಶನ ನೀಡಿರುವುದಾಗಿ ಶಿವಮೊಗ್ಗ ಬೈಂದೂರು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಕೇಂದ್ರ ಸಚಿವ ತೋಮಾರ್ ಅವರು ನೀಡಿರುವ ನಿರ್ದೇಶನದಲ್ಲಿ ಅಡಿಕೆಯ ಎಲೆ ಚುಕ್ಕೆ ರೋಗದ (YLD) ಅಧ್ಯಯನ ಮತ್ತು ಸಮಸ್ಯೆಯನ್ನು ಪರಿಹರಿಸಲು ವೈಜ್ಞಾನಿಕ ಸಮಿತಿಯನ್ನು ರಚಿಸಲಾಗಿದೆ ಮತ್ತು ಎಲೆ ಚುಕ್ಕೆ ಸಮಸ್ಯೆಯನ್ನು (YLD) ಪರಿಹರಿಸಲು ಸಮಿತಿಯು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದಿದ್ದಾರೆ.
ಈ ಬಗ್ಗೆ ಸಚಿವರ ತ್ವರಿತ ಪ್ರತಿಕ್ರಿಯೆಗಾಗಿ ಮಲೆನಾಡಿನ ರೈತರ ಪರವಾಗಿ ಸಂಸದ ಬಿ.ವೈ.ಆರ್ ಕೃತಜ್ಞತೆ ಸಲ್ಲಿಸಿದ್ದಾರೆ.