ಕುಂದಾಪುರ ಮಿರರ್ ಸುದ್ದಿ…
ಕೋಟ: ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಥೆಯ ಅಡಿಯಲ್ಲಿ ನಡೆದ ಜ್ಞಾನ ವಿಜ್ಞಾನ ಮೇಳದಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರ, ವಿದ್ಯಾಗಿರಿ ,ತೆಕ್ಕಟ್ಟೆಯ ವಿದ್ಯಾರ್ಥಿಗಳಾದ ಸಂಕಲ್ಪ ಕುಮಾರ್, ಐಶ್ವರ್ಯ, ಸಿಂಧೂರ ಇವರು ಹೈದರಾಬಾದಿನಲ್ಲಿ ನಡೆದ ಸಂಸ್ಕೃತಿ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಯಾಗರಾಜ್‍ದಲ್ಲಿ ನಡೆಯುವ ಅಖಿಲ ಭಾರತೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಕಥಾಕಥನ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ ಋಗ್ವಿಲಾಸ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.