ನವೆಂಬರ್ 7ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೀಮೆಎಣ್ಣೆಗಾಗಿ ಹಕ್ಕೊತ್ತಾಯ ಆಂದೋಲನ ಮೀನುಗಾರ ಮುಖಂಡರಿಂದ ಎಚ್ಚರಿಕೆ

0
993

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ಮೀನುಗಾರರ ಸೀಮೆಎಣ್ನೆ ಬಿಡುಗಡೆಯಾಗದೇ ಇದ್ದಲ್ಲಿ ನವೆಂಬರ್ 7ರಂದು ಉಡುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಹೇಳಿದ್ದಾರೆ.

Click Here

ಗುರುವಾರ ಉಪ್ಪುಂದದಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಲವು ಬಾರಿ ಸಂಸದ ಹಾಗೂ ಸಚಿವರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ ಅವರು, ಕಳೆದ ಮೂರು ತಿಂಗಳಿನಿಂದ ಸೀಮೆಎಣ್ಣೆ ಬಿಡುಗಡೆ ಮಾಡದೇ ಇರುವುದರಿಂದ ಮೀನುಗಾರರು ಬೀದಿಗೆ ಬರುವಂತಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ನಳಿನ್ ಕುಮಾರ್ ಕಟೀಲ್, ಬಿ.ವೈ ರಾಘವೇಂದ್ರ ಅವರ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ಸರ್ಕಾರದ ಸ್ಪಂದನೆ ಶೂನ್ಯವಾಗಿದೆ ಎಂದು ಆರೋಪಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ನವೀನ್ ಚಂದ್ರ ಉಪ್ಪುಂದ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗಬೇಕಿದ್ದ ಸೀಮೆ ಎಣ್ಣೆ ತಕ್ಷಣ ಬಿಡುಗಡೆ ಮಾಡಬೇಕು. 2016-17ರ ಸಾಲಿನಿಂದ ಮೀನುಗಾರರಿಗೆ ಸಿಗಬೇಕಾದ ಶೇ.50 ಸಬ್ಸಿಡಿಯನ್ನು ತಕ್ಷಣ ಜ್ಯಾರಿಗೆ ತರಬೇಕು. ಕರಾವಳಿಯ 8140 ಪರ್ಮಿಟ್ಗಳಿಗೆ 120 ಕೋಟಿ ರೂಪಾಯಿಯ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಪ್ರ.ಕಾರ್ಯದರ್ಶಿ ಗೋಪಾಲ್ ಆರ್.ಕೆ., ಗೌರವ ಸಲಹೆಗಾರರಾದ ಚಂದ್ರಕಾಂತ್ ಕರ್ಕೇರ, ಸಂಘಟನಾ ಕಾರ್ಯದರ್ಶಿಗಳಾದ ಯಶವಂತ ಖಾರ್ವಿ ಗಂಗೊಳ್ಳಿ, ಅಶ್ವಥ್ ಕಾಂಚನ್ ಮಂಗಳೂರು, ಕೃಷ್ಣ ಹರಿಕಾಂತ್ ಮುರ್ಡೇಶ್ವರ, ಉಪಾಧ್ಯಕ್ಷರಾದ ವಿಕ್ರಂ ಸಾಲ್ಯಾನ್ ಮಲ್ಪೆ, ವಸಂತ ಸುವರ್ಣ, ಸತೀಶ್ ಕುಂದರ್, ಕೋಶಾಧಿಕಾರಿ ಪುರಂದರ ಕೋಟ್ಯಾನ್ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here