ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋಪೂಜಾ ಕಾರ್ಯಕ್ರಮ ಪಾಂಡೇಶ್ವರ ಮೂಡಹಡು ಗ್ರಾಮದ ಎಡಬೆಟ್ಟುವಿನ ರಾಮಕೃಷ್ಣ ಐತಾಳ ಮನೆಯಲ್ಲಿ ಜರಗಿತು. ರಾಮಕೃಷ್ಣ ಐತಾಳರು ಧಾರ್ಮಿಕ ಕಾರ್ಯಗಳನ್ನು ನೆರವೆರಿಸಿದರು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರ ನೇತ್ರತ್ವದಲ್ಲಿ ಶಾಸ್ತ್ರೋಕ್ತ ವಿಧಾನಗಳಿಂದ ಗೋಪೂಜಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್,ಚೇಂಪಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಐತಾಳ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ,ಪಾಂಡೇಶ್ವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್,ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕ ಶ್ರೀನಿವಾಸ ಅಮೀನ್,ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯ ರವೀಂದ್ರ ಕಾಮತ್,ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯ ವೈಬಿ ರಾಘವೇಂದ್ರ ಆಚಾರ್ ,ಡಿಸಿಸಿ ಸದಸ್ಯರಾದ ಬಾಲಕೃಷ್ಣ ಪೂಜಾರಿ ಸಾಸ್ತಾನ,ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಯಕ್ಷೀಮಠ, ಕೋಟ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಹೊಳ್ಳ್ ಕಾರ್ಕಡ,ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ದಿನೇಶ್ ಬಂಗೇರ,ಉಡುಪಿ ಜಿಲ್ಲಾ ಐಟಿ ಸೆಲ್ ಉಪಾಧ್ಯಕ್ಷ ಗಣೇಶ್ ನೆಲ್ಲಿಬೆಟ್ಟು, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ ,ಬ್ಲಾಕ್ ಇಂಟೆಕ್ ಅಧ್ಯಕ್ಷದೇವೇಂದ್ರ ಗಾಣೆಗ ಕೋಟ, ಬ್ಲಾಕ್ ಕಟ್ಟಡ ಕಾರ್ಮಿಕ ಘಟಕದ ಅಧ್ಯಕ್ಷ ರವಿ ಪೂಜಾರಿ ಕೋಟ, ಶಿವಣ್ಣ ಕೋಟ, ಅಶ್ವಥ್ ಕೋಟ, ಕೇಶವ್ ಮೆಂಡನ್ ಪಾರಂಪಳ್ಳಿ, ಸಂಜೀವ ಪೂಜಾರಿ ಭುವನೇಶ್ವರಿ ಎಡಬೆಟ್ಟು, ದಿನಕರ್ ಎಡಬೆಟ್ಟು,ಅವಿನಾಶ್ ಎಡಬೆಟ್ಟು, ಮಹೇಂದ್ರ ಪೂಜಾರಿ ಎಡಬೆಟ್ಟು, ಧೀರಜ್ ಎಡಬೆಟ್ಟು, ಮಿಥುನ್ ಶೆಟ್ಟಿಗಾರ್ ಗುಂಡ್ಮಿ ಮೊದಲಾದವರು ಉಪಸ್ಥಿತರಿದ್ದರು.