ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕನ್ನಡ ರಾಜ್ಯೋತ್ಸವ ಎನ್ನವುದು ನಾಡಿನ ಪ್ರತಿ ಮನೆಯಲ್ಲಿ ಆಚರಿಸುವ ಹಬ್ಬವಾಗ ಬೇಕು ಈ ನಿಟ್ಟಿನಲ್ಲಿ ಸಂಘವು ಪ್ರತಿ ವರ್ಷ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮವು ಶ್ಲಾಘನೀಯ ಎಂದು ಹಿರಿಯ ನ್ಯಾಯವಾದಿ ಮುದ್ದಣ ಶೆಟ್ಟಿ ಹೇಳಿದರು.
ಅವರು ಕನ್ನಡಾಭಿಮಾನಿ ಡಾ. ರಾಜ್ ಸಂಘಟನೆಯ ವತಿಯಿಂದ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ 67ನೇ ರಾಜ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು.
ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಉದ್ಯಮಿ ಶ್ರೀಧರ್ ಗಾಣಿಗ ದೀಪ ಬೆಳಗಿಸಿದರು. ಪ್ರಣಮ್ಯಾಡಿ ಅವರ ಪ್ರಾರ್ಥನೆ ಯಿಂದ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೊಬೈಲ್ ಎಕ್ಸ್ ನ ಮುಸ್ತಫಾ, ರೊಯ್ಸನ್ ಡಿಸೋಜಾ ಆಗಮಿಸಿದ್ದರು. ಸಭೆಯಲ್ಲಿ ಅಗಸ್ಟಿನ್ ಡಿಸೋಜ, ಪ್ರಭಾಕರ ಶಾಮಿಯಾನ, ನವೀನ್ ಪೂಜಾರಿ , ಯಾಸಿನ್ ಹೆಮ್ಮಾಡಿ, ಕಿಶನ್ ಖಾರ್ವಿ, ನಾರಾಯಣ ಗಾಣಿಗ ತೆಕ್ಕಟ್ಟೆ, ಗುರು ಖಾರ್ವಿ, ಗಾಳಿ ಮಾಧವ ಖಾರ್ವಿ, ದಯಾ, ಶಿವರಾಜ್ ಖಾರ್ವಿ, ನಾಗರಾಜ್ ಖಾರ್ವಿ, ಪ್ರಶಾಂತ್ ಖಾರ್ವಿ, ನಾಗರಾಜ್ ಗಾಣಿಗ, ಪ್ರಕಾಶ್ ಸಾರಂಗ ಮೊದಲಾದವರು ಉಪಸ್ಥಿತರಿದ್ದರು. ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿದರು. ಪ್ರಸಾದ್ ಗಾಣಿಗ ನಿರೂಪಣೆಗೈದರು. ದುಂಡಿರಾಜ್ ಹಟ್ಟಿಕುದ್ರು ವಂದಿಸಿದರು.