ಕರಾವಳಿಯ ಚುರುಕುತನ ಮಲೆನಾಡಿನ ದೃಢತೆಯಿಂದ ಸಂಕಲ್ಪ ಸಾಧ್ಯ. ಶ್ರೀರಾಮ ಭಜನಾ ಮಂದಿರದಲ್ಲಿ ಕೋಟಿರಾಮ ತಾರಕ ಮಂತ್ರ ಜಪ ಯಜ್ಞ ದಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ

0
376

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: 48 ಕಿ.ಮೀ ಕರಾವಳಿ ಹಾಗೂ 110 ಕಿ. ಮೀ ಮಲೆನಾಡಿನ ಮಧ್ಯದಲ್ಲಿ ಕೋಟಿ ತಾರಕ ರಾಮ ಜಪ ಹಿಂದೆಂದೂ ಆಗಿಲ್ಲ. ಕರಾವಳಿಯ ಚುರುಕುತನ ಹಾಗೂ ಮಲೆನಾಡಿನ ದೃಢತೆಯ ಸಂಗಮವೇ ಈ ನಾಡು. ಮಾರ್ಚ್ 20 ರ ವರೆಗೆ ನಡೆಯುವ ರಾಮ ಜಪ ಹಿಂದೂ ಧರ್ಮ ರಕ್ಷಣೆಗೆ ಪೂರಕ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

Video:

Click Here

Click Here

ಅವರು ಬುಧವಾರ ಬೈಂದೂರು ತಾಲೂಕಿನ ನಾಗೂರು – ಕಿರಿಮಂಜೇಶ್ವರದ ಹೊಸಹಿತ್ಲುವಿನ ಶ್ರೀರಾಮ ಭಜನಾ ಮಂದಿರದಲ್ಲಿ ಹಮ್ಮಿಕೊಳ್ಳಲಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರ ಮಠ ಹೊಸನಗರ ಇವರ ಆಶೀರ್ವಾದದೊಂದಿಗೆ ಡಾ. ಎ. ಚೆನ್ನಕೇಶವ ಗಾಯತ್ರಿ ಭಟ್‌ ಗಜಪುರ ಆನಗಳ್ಳಿ ಇವರ ನೇತೃತ್ವದಲ್ಲಿ ಹಾಗೂ ಕ್ಷೇತ್ರ ಪುರೋಹಿತರಾದ ನಾಗೂರು ನಾಗರಾಜ ಐತಾಳರ ಪೌರೋಹಿತ್ಯದಲ್ಲಿ ಸುವರ್ಣ ಮಹೋತ್ಸವಕ್ಕೆ ಚಾಲನೆ, ಕೋಟಿರಾಮ ತಾರಕ ಮಂತ್ರ ಜಪ ಯಜ್ಞ ಆರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಾಜೀ ಸಚಿವ ಪ್ರಮೋದ್ ಮಧ್ವರಾಜ್ ಸುವರ್ಣ ಮಹೋತ್ಸವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಇದೇ ಸಂದರ್ಭ 13 ಜನರಿಗೆ ದೀಕ್ಷೆ ನೀಡಿ ಮಾತನಾಡಿದ ಮಧ್ವರಾಜ್ ಕಾರ್ಯಕ್ರಮವು ಹಿಂದೆಂದೂ ಕಾಣದ ರೀತಿಯಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ಸುವರ್ಣೋತ್ಸವ ಸಮಿಯ ಕಾರ್ಯಾಧ್ಯಕ್ಷ ದೇವಿದಾಸ್ ಮೆಂಡನ್ ಮಾತನಾಡಿ, 2023 ಫೆಬ್ರವರಿ 2000ದ ಮಾಘ ಮತ್ತು ಫಾಲ್ಗುಣ ಮಾಸದಲ್ಲಿ ಪಂಚಮದಿನ ಪರ್ಯಂತ ಅಖಂಡ ಭಜನಾ ಮಹೋತ್ಸವ, ಕೋಟಿ ರಾಮತಾರಕ ಮಂತ್ರ ಜಪ ಯಜ್ಞ, ಕನಕಾಭಿಷೇಕ, ಸಮುದ್ರನಿರಾಂಜನ, ಸೀತಾಕಲ್ಯಾಣೋತ್ಸವ ಇತ್ಯಾದಿ ಅಭೂತಪೂರ್ವ ಮಂಗಳ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಬೈಂದೂರು ಬಿಜೆಪಿ ಮಂಡಳದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಪಂ.ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪ್ರಣಯ್ ಕುಮಾರ್ ಶೆಟ್ಟಿ, ಬೈಂದೂರು ತಾ.ಪಂ.ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ನಾಗೂರು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಾಜಿ ಸದಸ್ಯ ನರಸಿಂಹ ಹಳಗೇರಿ, ಶ್ರೀ ಅಗಸ್ತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಪ್ರಕಾಶ್ ಐತಾಳ್, ಅನುರಾ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here