ಕುಂದಾಪುರ ಮಿರರ್ ಸುದ್ದಿ…
ಕೋಟ: ಕ್ರೀಡೆ ಎಂಬುವ ದೈಹಿಕ ಕ್ಷಮತೆ ಹೆಚ್ಚಿಸಲು ಸಹಕಾರಿ ಎಂದು ಸ್ಪೋರ್ಟ್ಸ್ ಕನ್ನಡ ವೈಬ್ ವಾಹಿನಿಯ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್ಯ ಹೇಳಿದ್ದಾರೆ.
ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ರಜತ ಸಂಭ್ರಮದ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸಂಘಸಂಸ್ಥೆಗಳು ಕ್ರೀಡೆಗಳನ್ನು ಹೆಚ್ಚು ಹೆಚ್ಚುಆಯೋಜಿಸಬೇಕು ತನ್ಮೂಲಕ ಕ್ರೀಡಾ ಸ್ಪರ್ಧಿಗಳಾಗಿ ಹೊರಹೊಮ್ಮಬೇಕು. ಕ್ರೀಡೆಯಲ್ಲಿ ಸೋಲು ಗೆಲುವಿಗಿಂದ ಸ್ಪರ್ಧಾ ಮನೋಭಾವನೆ ಹೆಚ್ಚಿಸಬೇಕು ಎಂದು ಕರೆಇತ್ತರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನಕಿ ಹಂದೆ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಅಶೋಕ್,ಪಂಚವರ್ಣದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.