ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:ರೈತರ ಕಷ್ಟ ಪರಿಹಾರ ಮಾಡಬೇಕು. ರೈತರಿಗೆ ಏನು ಮಾಡಿದರೆ ಅನುಕೂಲ ಎಂದು ಬೇರೆ ಬೇರೆ ಸಮಿತಿ ವರದಿ, ಕೃಷಿ ತಜ್ಞರ ಅಭಿಪ್ರಾಯ, ಹಿರಿಯ ಕೃಷಿಕರ ಸಲಹೆ ಸೂಚನೆಯಂತೆ ಕೃಷಿ ಮಸೂದೆ ತರಲಾಗುತ್ತಿದೆ. ರೈತರ ಹೆಸರಲ್ಲಿ ಪ್ರತಿಭಟನೆ ದುರದೃಷ್ಟಕರ, ಹೊಸ ಕೃಷಿ ಕಾಯಿದೆಯಲ್ಲಿ ಎಪಿಎಂಸಿ ಮತ್ತು ರೈತರ ಅನುಕೂಲ ಸ್ಥಳದಲ್ಲಿ ಕೃಷಿ ಉತ್ಪನ್ನ ಮಾರಟಕ್ಕೆ ಅವಕಾಶವಿದ್ದರೂ ರೈತರ ಹೆಸರಲ್ಲಿ ದಲ್ಲಾಳಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಹಿತಕ್ಕಾಗಿ, ಮೋದಿ ಹೆಸರಿಗೆ ಕಪ್ಪುಚುಕ್ಕೆ ಬಾರದಂತೆ ಪಾರದರ್ಶಕ ಸಚಿವೆಯಾಗಿ ಕೆಲಸ ಮಾಡುತ್ತೇನೆ ಎಂದು ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.
ಕುಂದಾಪುರ ಬಿಜೆಪಿ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್‍ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸತ್ ಅದೇಶನದಲ್ಲಿ ವಿರೋಧ ಪಕ್ಷದವರು ನೂತನ ಸಚಿವರ ಪರಿಚಯಕ್ಕೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಜನ ಸಂಪರ್ಕ ಯಾತ್ರೆ ಆರಂಭಿಸಲಾಗಿದೆ ಎಂದರು.
ತನ್ನದಲ್ಲದ ತಪ್ಪಿಗೆ ಹರೀಶ್ ಬಂಗೇರ ಸರಿಸುಮಾರು ಎರಡು ವರ್ಷ ಜೈಲು ಸೇರಲು ಕಾರಣರಾದವರ ವಿರುದ್ಧ ಉಗ್ರಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದ ಅವರು, ಎರಡೂ ಬಾರಿ ನಡೆದ ಸಂಸತ್ ಚುನಾವಣೆಯಲ್ಲಿ ಕುಂದಾಪುರ ಕ್ಷೇತ್ರ ಅತೀಹೆಚ್ಚು ಮತ ಕೊಟ್ಟಿದ್ದು, ಈವತ್ತು ಸಚಿವೆ ಯಾಗಲು ಕಾರಣ. ಮತದಾರರ ನಂಬಿಕೆಗೆ ಹುಸಿ ಬಾರದ ರೀತಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕೃಷಿ ಕ್ಷೇತ್ರ ವಿಶಾಲವಾಗಿದ್ದು, ಅಡಕೆ, ತೆಂಗು, ಕಾಫಿ, ತೋಟಗಾರಿಕೆ, ಭತ್ತ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ರೈತರ ಸ್ನೇಹಿಯಾಗಿ ಕೆಲಸ ಮಾಡುತ್ತೇನೆ ಎಂದ ಅವರು, ಮೋದಿ ನೇತೃತ್ವದ ಸರ್ಕಾರ ಶೇ.೯೫ರಷ್ಟು ಬೇಡಿಕೆ ಈಡೇರಿಸಿದೆ. ರೈತರ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಕಾನೂನು ಚೌಕಟ್ಟಿನಡಿ ಪರಿಹಾರ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸೌದಿ ಜೈಲಿನಿಂದ ಬಿಡುಗಡೆಯಾಗಿ ಬಂದ ಹರೀಶ್ ಬಂಗೇರ ಹಾಗೂ ಪತ್ನಿ ಸುಮನಾ ಅವರ ಶೋಭಾ ಕರಂದ್ಲಾಜೆ ಸನ್ಮಾನಿಸಿದರು. ಕುಂದಾಪುರ ವಲಯ ಬಿಜೆಪಿ ವತಿಯಿಂದ ಸಚಿವೆ ಶೋಭಾ ಕಂದ್ಳಾಜೆ ಅವರ ಹಿರಿಯ ಬಿಜೆಪಿ ಸದಸ್ಯ ಕಿರಣ್ ಕೊಡ್ಗಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಗೌರವಿಸಿದರು.
ಉಡುಪಿ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ದಕ ಬಿಜೆಪಿ ಉಸ್ತುವಾರಿ ಉದಯ ಕುಮಾರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮುನಿರಾಜು ಗೌಡ, ಜಿಲ್ಲಾ ಪ್ರಧಾನ ಕಾರ್‍ಯದರ್ಶಿಗಳಾದ ಕುತ್ಯಾಡಿ ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ದಕ ಸಹಾಯಕ ಪ್ರಭಾರಿ ರಾಜೇಶ್ ಕಾವೇರಿ ಮಹಿಳಾ ಮೋಚಾ ಅಧ್ಯಕ್ಷೆ ವೀಣಾ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಉಪ್ಪೂರು, ಯುವ ಮೋರ್ಚಾ ಅಧ್ಯಕ್ಷ ಶೀಶ ನಾಯಕ್ ಇದ್ದರು.
ಯುವ ಮೋಚಾ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ವಕ್ವಾಡಿ ಸ್ವಾಗತಿಸಿ ನಿರೂಪಿಸಿದರು