ಕುಂದಾಪುರ ಮಿರರ್ ಸುದ್ದಿ…
ಕೋಟ: ಬಿಲ್ಲವ ಸಮುದಾಯ ಸಮಾವೇಶಗಳ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಅದೇ ನಮ್ಮೆಲ್ಲರಿಗೆ ಶಕ್ತಿಯಾಗಬೇಕು ಎಂದು ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು.
ಭಾನುವಾರ ಬ್ರಹ್ಮಬೈದರ್ಕಳ ಗೋಳಿಗರಡಿ ಇಲ್ಲಿನ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಇದೇ ಬರುವ ಡಿ. 11 ರಂದು ಸಾಸ್ತಾನದ ಗೋಳಿಗರಡಿಯಲ್ಲಿ ಬಿಲ್ಲವ ಬೃಹತ್ ಸಮಾವೇಶ ಕಾರ್ಯಕ್ರಮದ ಪೂರ್ವತಯಾರಿ ಹಾಗೂ ಆಮಂತ್ರಣ ಬಿಡುಗಡೆ ಸಮಾರಂಭದಲ್ಲಿಮಾತನಾಡಿ ಸಮಾಜದ ಮುಖ್ಯವಾಹಿನಿಯಲ್ಲಿ ಬಿಲ್ಲವ ಸಮುದಾಯ ಪ್ರಬಲವಾಗಿ ಗುರುತಿಸಿಕೊಂಡಿದೆ ಅಲ್ಲದೆ ಸಾಕಷ್ಟು ವಿಭಾಗದಲ್ಲಿ ಬಿಲ್ಲವ ಬಂಧುಗಳ ಸಾಧನೆ ಅಗಾಧವಾಗಿ ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ ಇಂಥಹ ಸಮುದಾಯ ಒಗ್ಗೂಡಿ ಕಾರ್ಯನಿರ್ವಹಿಸಲು ಸಮಾವೇಶ ಕಾರ್ಯಕ್ರಮಗಳು ವೇದಿಕೆಯಾಗಬೇಕು ಈ ದಿಸೆಯಲ್ಲಿ ಸಾಸ್ತಾನ ಪರಿಸರದಲ್ಲಿ ನಡೆಯುವ ಕಾರ್ಯಕ್ರಮಗಳು ಸಮುದಾಯದ ಏಳಿಗೆಗೆ ಪ್ರೇರಕ ಶಕ್ತಿಯಗಿ ಜೊತೆಗೆ ಮನಸ್ಸುಗಳು ಒಂದಾಗಿ ಕಾರ್ಯನಿರ್ವಹಿಸಿ, ಯಶಸ್ವಿಗೊಳಿಸಲು ಕರೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಬೈದರ್ಕಳ ಗೋಳಿಗರಡಿ ಬಿಲ್ಲವ ಸೇವಾ ಸಂಘ ಇದರ ಅಧ್ಯಕ್ಷ ಎಂ.ಸಿ ಚಂದ್ರಶೇಖರ ಪೂಜಾರಿ ವಹಿಸಿದ್ದರು.
ಇದೇ ವೇಳೆ ಸಮಾವೇಶದ ಆಮಂತ್ರಣ ಸಂಕಲ್ಪ ಇದನ್ನು ಗಣ್ಯರು ಬಿಡುಗಡೆಗೊಳಿಸಿದರು.
ಈ ವೇಳೆ ಸಂಘದ ಗೌರವಾಧ್ಯಕ್ಷ ಜಿ.ವಿಠ್ಠಲ್ ಪೂಜಾರಿ, ಗೌರವ ಸಲಹೆಗಾರ ಚೆನ್ನಯ್ಯ ಪೂಜಾರಿ,ಶಂಕರ್ ಪೂಜಾರಿ ಪಾತ್ರಿಗಳು,ಪಂಜು ಪೂಜಾರಿ ಯಡಬೆಟ್ಟು,ಬಸವ ಪೂಜಾರಿ,ಉಪಾಧ್ಯಕ್ಷರಾದ ಸುರೇಶ್ ಪೂಜಾರಿ ಪಾಂಡೇಶ್ವರ, ರಾಜು ಪೂಜಾರಿ ಮೂಡಹಡು,ಸುರೇಶ್ ಪೂಜಾರಿ ಗುಂಡ್ಮಿ,ಸುಧಾಕರ ಪೂಜಾರಿ ಐರೋಡಿ,ವಿಜಯ ಪೂಜಾರಿ ಬಾಳ್ಕುದ್ರು, ಸಂಘದ ಕೋಶಾಧಿಕಾ ವಿಜಯ ಪೂಜಾರಿ ಐರೋಡಿ,ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಚಂದ್ರಮೋಹನ್ ಪೂಜಾರಿ ನಿರೂಪಿಸಿ ವಂದಿಸಿದರು.